ಕೊರೊನಾ ಮುಕ್ತಿಗಾಗಿ ಪಂಚಮುಖಿ ಹನುಮನಿಗೆ ಪೂಜೆ

ಚಾಮರಾಜನಗರ, ಏ.26- ಕೊರೊನಾ ಮಹಾಮಾರಿ ಎರಡನೇ ಅಲೆ ಕಾರಣದಿಂದ ಜನ ತತ್ತರಿಸಿ ಹೋಗುತ್ತಿದ್ದು, ಜನರು ಭಯಭೀತರಾಗಿದ್ದಾರೆ ಈ ಕಾರಣದಿಂದ ಮಹಾಮಾರಿ ತೊಲಗಲೆಂದು ಹನುಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪವಿರುವ ಸುಪ್ರಸಿದ್ಧ ಪಂಚಮುಖಿ ಹನುಮನಿಗೆ ಇಂದು ಪಂಚಾಮೃತ ಅಭಿμÉೀಕ, ತುಳಸಿ ಅರ್ಚನೆ, ವೀಳ್ಯದೆಲೆಯ ವಿಶೇಷ ಅಲಂಕಾರ ಮಾಡಿ ಕೊರೊನಾ ಮಹಾಮಾರಿಯ ಶೀಘ್ರ ತೊಲಗಲಿ ಎಂದು ದೇವಸ್ಥಾನದ ಜಗದೀಶ್ವರಿ ಅವರು ಪ್ರಾರ್ಥಿಸಿದರು.
ರಾಮನವಮಿಯಿಂದಲೇ ದೇಗುಲಗಳಿಗೆ ಬೀಗ ಬಿದ್ದಿರುವುದರಿಂದ ದೇವಾಲಯಗಳಿಗೆ ಭಕ್ತರಿಗೆ ನಿಬರ್ಂಧ ಏರಿರುವುದರಿಂದ ಇಂದು ಯಾವ ಭಕ್ತರಿಗೂ ಪ್ರವೇಶ ಇರಲಿಲ್ಲ, ಕೇವಲ ಅರ್ಚಕರμÉ್ಟೀ ಪೂಜೆ ಸಲ್ಲಿಸಿದರು. ಅರ್ಚಕ ಪ್ರಜ್ವಲ್ ಇದ್ದರು.