ಕೊರೊನಾ ಮುಂಜಾಗ್ರತೆ: ಕೊಂಗಳ್ಳಿ ಬೆಟ್ಟಕ್ಕೆ 2 ತಿಂಗಳು ಭಕ್ತರ ಪ್ರವೇಶಕ್ಕೆ ನಿರ್ಬಂಧ

ಚಾಮರಾಜನಗರ, ನ.14- ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಶ್ರೀ ಕೊಂಗಳ್ಳಿ ಬೆಟ್ಟಕ್ಕೆ 2 ತಿಂಗಳು ಭಕ್ತರ ಪ್ರವೇಶಕ್ಕೆ ನಿಬರ್ಂಧಿಸಲಾಗಿದೆ.
ತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಬೆಟ್ಟಕ್ಕೆ ಈ ಸಮಯದಲ್ಲಿ ಕರ್ನಾಟಕದ ಅದರಲ್ಲೂ ಚಾಮರಾಜನಗರ ಜಿಲ್ಲೆಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ನವಂಬರ್ 15 ರಿಂದ 2021ರ ಜನವರಿ 12 ರವರೆಗೆ ಭಕ್ತರ ಪ್ರವೇಶವನ್ನು ನಿಬರ್ಂಧಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ದೇವಾಸ್ಥಾನದ ಅರ್ಚಕ ಮಲ್ಲಿಕಾರ್ಜುನಸ್ವಾಮಿ ಅವರು ತಿಳಿಸಿದ್ದಾರೆ. ಭಕ್ತಾಧಿಗಳು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.