ಕೊರೊನಾ: ಮಹಾರಾಷ್ಟ್ರ ರಸ್ತೆ ಸಂಪರ್ಕ ಬಂದ್

ಬೆಳಗಾವಿ, ಮಾ ೨೬: ಮಹಾರಾಷ್ಟ್ರದಲ್ಲಿ ಕೊರೊನಾ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯದ
ರಸ್ತೆಗಳಿಗೆ ಮುಳ್ಳು ಹಾಕಿ ಅಧಿಕಾರಿಗಳು ರಸ್ತೆ ಬಂದ್ ಮಾಡಿದ್ದಾರೆ.

ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿದ ತಾಲೂಕಾಡಳಿತ ಚಿಕ್ಕೋಡಿ ತಾಲೂಕಿನಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ – ದಾನವಾಡ, ಯಕ್ಸಂಬಾ – ದತ್ತವಾಡ, ಮಲಿಕವಾಡ – ದತ್ತವಾಡ ಹಾಗೂ ಸದಲಗಾ – ದತ್ತವಾಡ ರಸ್ತೆಗಳನ್ನು ಚಿಕ್ಕೋಡಿ ತಾಲೂಕಾಡಳಿತ ಬಂದ ಮಾಡಿದೆ.

ಕೇವಲ ಕುಗನೊಳ್ಳಿ ಚಕ್ ಪೋಸ್ಟ್ ಹಾಗೂ ಕಾಗವಾಡ ಚಕ್ ಪೋಸ್ಟ್ ದಾರಿಯಿಂದಲೇ ಬರುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದ ಆದೇಶ ಹಿನ್ನೆಲೆ ಮುಂದೆ ನಿಂತು ರಸ್ತೆ ಬಂದ ಮಾಡಿಸುತ್ತಿರುವ ಅಧಿಕಾರಿಗಳು, ಆರ್ ಟಿ ಪಿ ಸಿ ಆರ್ ಟೆಸ್ಟ್ ರಿಪೋರ್ಟ್ ಇದ್ದರೆ ಮಾತ್ರ ಕಾಗವಾಡ ಹಾಗೂ ಕೊಗನೊಳ್ಳಿ ಈ ಎರಡು ಟೋಲ್ ಗಳ ಮೂಲಕ ರಾಜ್ಯ ಪ್ರವೇಶಕ್ಕೆ ಅನುವತಿ ನೀಡಲಾಗುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.