ಕೊರೊನಾ ಭೀತಿ; ರೆಸಾರ್ಟ್‌ನಲ್ಲೆ ಉಳಿದ ಎಚ್‌ಡಿಕೆ

ಹಾಸನ, ಸೆ. ೨೧-ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಇಂದಿನಿಂದ ಕಲಾಪ ಆರಂಭವಾಗಿದ್ದು, ಹಲವು ಶಾಸಕರಿಗೆ ಸೋಂಕಿನ ಭೀತಿ ಎದುರಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ.
ಹಾಸನದ ಹೊಯ್ಸಳ ರೆಸಾರ್ಟ್‌ನಲ್ಲಿ ಕುಮಾರಸ್ವಾಮಿ ಕುಟುಂಬ ವಾಸ್ತವ್ಯ ಹೂಡಿದ್ದು, ಕುಟುಂಬ ಸಮೇತರಾಗಿ ಪ್ರವಾಸ ಕೈಗೊಂಡಿದೆ. ಆದರೆ ಅಧಿವೇಶನಕ್ಕೂ ತೆರಳದೆ ಕುಮಾರಸ್ವಾಮಿ ಮತ್ತು ಅನಿತಾ ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದಾರೆ.
ಕಾರ್ಯರ್ತರು ಹಾಗೂ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ.ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಕುಟುಂಬ ಪರೀಕ್ಷೆ ಮಾಡಿಸಿದ್ದಾರೆ.
ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ನೇತೃತ್ವದ ತಂಡ ಗಂಟಲು ದ್ರವ ಪರೀಕ್ಷೆ ಮಾಡಿದೆ. ಕೊರೊನಾ ವರದಿ ಬಂದ ನಂತರ ಕುಮಾರಸ್ವಾಮಿ ಬೆಂಗಳೂರಿಗೆ ಹಿಂದಿರುಗುವ ನಿರೀಕ್ಷೆಯಿದೆ.