ಕೊರೊನಾ ಭೀತಿಯ ನಡುವೆ ದಸರಾ ಸರಳ ಆಚರಣೆ

ನರೇಗಲ್ಲ,ಅ27 : ಒಂಬತ್ತು ದಿನಗಳ ದಸರಾ (ನಾಡ ಹಬ್ಬ)ವನ್ನು ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಭೀತಿಯ ನಡುವೆ ಅತ್ಯಂತ ಸರಳ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿಜಯದಶಮಿ ದಿನ ಸೋಮವಾರ ಸಂಜೆ ಬನ್ನಿ ಕೊಡುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಪ್ರಸಕ್ತ ದಸರಾ ಹಬ್ಬ ಸಂಪನ್ನಗೊಂಡಿತು.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜೋಳದ ದಂಟು, ಕಬ್ಬು ಹಾಗೂ ಬನ್ನಿ, ಬಿಲ್ವಪತ್ರಿ, ಹೂ ಮಾರಾಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಜರುಗಿತು. ಕೊರೊನಾ ನಿಮಯ ಜಾರಿಯಲ್ಲಿರುವುದರಿಂದ ಸಿಮೀತಿ ಜನರು ನರೇಗಲ್ಲ ಪಟ್ಟಣದಿಂದ ಮಜರೆ ದ್ಯಾಂಪೂರ ಗ್ರಾಮಕ್ಕೆ ತೆರಳಿ ಬನ್ನಿ ವೃಕ್ಷಕ್ಕೆ ಬನ್ನಿ ಮುಡಿದು ಪೂಜೆ ಸಲ್ಲಿಸಲಾಯಿತು.

ಮಹಾಲಯ ಅಮಾವಾಸ್ಯೆಯಿಂದ ಆರಂಭವಾದ ದಸರಾ ಹಬ್ಬದ ಹಿನ್ನೆಲೆಯಲ್ಲಿ ಹತ್ತು ದಿನಗಳವರೆಗೆ ಅಬ್ಬಿಗೇರಿ, ಯರೇಬೇಲೇರಿ, ನಾಗರಾಳ, ಡ.ಸ. ಹಡಗಲಿ, ಗುಜಮಾಗಡಿ, ಕುರುಡಗಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ನಿಡಗುಂದಿಕೊಪ್ಪ, ನಿಡಗುಂದಿ, ಹೊಸಳ್ಳಿ, ಹಾಲಕೆರೆ, ಕಳಕಾಪೂರ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಕೋಡಿಕೊಪ್ಪ, ನರೇಗಲ್ಲ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆ ಮನೆಗಳಲ್ಲಿ ಪರಂಪರೆಯಂತೆ ಘಟಸ್ಥಾಪನೆ, ದೇವತೆಗಳ ಆರಾಧನೆ, ಪುರಾಣ ಪಠಣ ಹೀಗೆ ನಿತ್ಯವೂ ಪೂಜೆ ನಡೆಯಿತು.

ಒಂಬತ್ತನೇ ದಿನ ನವರಾತ್ರಿಯಂದು ಆಯುಧಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಿದರು. ಕಬ್ಬು, ಜೋಳದ ದಂಟು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.