ಕೊರೊನಾ ಭಯ ಬೇಡಾ ಎಚ್ಚರದಿಂದಿರಿ: ಡಾ.ಸುಂಬಡ್

ಸೈದಾಪುರ:ಜೂ.3: ಕೋವಿಡ್-19 ಎರಡನೇ ಅಲೆಯ ಗ್ರಾಮೀಣ ಭಾಗದಲ್ಲಿ ಅತಿ ವೇಗದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಭಯ ಪಡದೆ ಎಚ್ಚರದಿಂದ ಮುಂಜಾಗೃತ ಕ್ರಮ ಕೈಗೊಳ್ಳುವುದರ ಮೂಲಕ ಸೋಂಕು ಹರಡದಂತೆ ನಿಗಾ ವಹಿಸಬೇಕು ಎಂದು ಡಾ.ಪ್ರವೀಣಕುಮಾರ ಬಿ. ಸುಂಬಡ್ ಹೇಳಿದರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆರ್ಯ ವೈಶ್ಯ ಸೇವಾ ಸಂಘದಿಂದ ವಾತವರಣದಲ್ಲಿ ಇರುವ ಆಮ್ಲಜನಕವನ್ನು ಶುದ್ಧೀಕರಿಸಿ ರೋಗಿಗಳಿಗೆ ನೀಡಬಹುದಾದ ಆಮ್ಲಜನಕ ಸಾಂಧ್ರಕಗಳನ್ನು ಉಚಿತವಾಗಿ ಸಾರ್ವಜನಿಕರ ಸೇವೆಗೆ ಹಸ್ತಾಂತರಿಸಿ ಮತ್ತು ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಜಗತ್ತನೆ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಅದರಲ್ಲಿಯು ನಮ್ಮ ಗ್ರಾಮೀಣ ಭಾಗದಲ್ಲಿಯೂ ಇದು ಕಂಡು ಬಂದಿದ್ದು ಕರೋನವು ಹರಡದಂತೆ ಆರೋಗ್ಯ ಇಲಾಖೆಯು ಹಲವಾರು ನಿಯಮಗಳು ಕೈಗೊಂಡಿದೆ ಅವುಗಳನ್ನು ಪಾಲಿಸಿ ಮತ್ತು ಆಮ್ಲಜನಕ ಸಾಂದ್ರಕಗಳನ್ನು ಸಾರ್ವಜನಿಕರಿಗೆ ಉಚಿತ ಸೇವೆಗೆ ನೀಡುತ್ತಿರುವ ಆರ್ಯ ವೈಶ್ಯ ಸಮಾಜದ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಸಂಘದ ಕಾರ್ಯದರ್ಶಿ ಕೆ ಪಿ ವೆಂಕಟೇಶ ಪೂರಿ ಗ್ರಾಮೀಣ ಭಾಗದ ಹೆಚ್ಚಿನ ಸೋಂಕಿತರಿಗೆ ಆಮ್ಲಜನಕ ಕೊರತೆ ಕಾಡುತ್ತಿರುವ ಹಿನ್ನಲೆಯಲ್ಲಿ ನಮ್ಮ ಸಂಘದ ವತಿಯಿಂದ ಆಮ್ಲಜನಕ ಸಾಂದ್ರಕಗಳನ್ನು ಸಾರ್ವಜನಿಕರ ಕೊಡುಗೆಯಾಗಿ ನೀಡಲಾಗಿದ್ದು ಇದರ ಸದೂಪಯೋಗವನ್ನು ಪಡೆದುಕೊಳ್ಳಬೇಕು. ಹಾಗೂ ಪಟ್ಟಣದಲ್ಲಿ ಕೊರೊನಾ ವಿರುದ್ಧ ಸೈನಿಕರಂತೆ ಹೋರಾಟ ಮಾಡುತ್ತಿರುವ ಮತ್ತು ಸದಾ ಕಾಲ ಬಡ ರೋಗಿಗಳ ಆರೈಕೆಯನ್ನು ಮಾಡುತ್ತೀರುವ ಡಾ.ಪ್ರವೀಣ ಕುಮಾರ ಸುಂಬಡ್ ಕಾರ್ಯವು ಅವಿಸ್ಮರಣಿಯವಾಗಿದೆ. ಮತ್ತು ಆಮ್ಲಜನಕದ ಅವಶ್ಯಕವಿರುವ ವ್ಯಕ್ತಿಗಳು 9449309146,9743486100 ಕ್ಕೆ ಸಂರ್ಪಕಿಸಿ ಎಂದು ಅವರು ತಿಳಿಸಿದರು. ಇದಕ್ಕೆ ಮುಂಚಿತವಾಗಿ ಕೊರೊನಾ ಸಂಕಷ್ಟ ಸಮಯದಲ್ಲಿ ಬಡ ರೋಗಿಗಳ ಆರೈಕೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಡಾ. ಪ್ರವೀಣಕುಮಾರ ಸುಂಬಡ್ ರವರಿಗೆ ಸಂಘದಿಂದ ವಿಶೇಷವಾಗಿ ಸನ್ಮಾನಿಸಲಾಯಿತ್ತು. ಈ ವೇಳೆ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ಪಾಲದಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಾದಾಮಿ, ನರಸಿಂಹಲು ಕಲಕೊಂಡ, ಅಶೋಕ ಗುಮಡಾಲ, ಕೆಪಿ ವೀರೇಶ, ಸತ್ಯನಾರಾಯಣ ಪತ್ತಿ, ಕೆಪಿ ವಸಂತಕುಮಾರ, ಸುರೇಶ ಪುರಿ, ವೆಂಕಟೇಶ ಪಾಲದಿ, ಮನೋಹರ, ನರಸಯ್ಯ ಪತ್ತಿ, ವಿಠೋಬಯ್ಯ ಪಾಲದಿ, ಸೇರಿದಂತೆ ಇತರರಿದ್ದರು.