ಕೊರೊನಾ ಬಂದರೂ ಕ್ಯಾರೇ ಎನ್ನದ ಅಧಿಕಾರಿಗಳು ಅನು ಪ್ರಭಾಕರ್ ಅಳಲು

ಬೆಂಗಳೂರು, ಏ.೨೨- ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಕಳೆದ ಏ೧೭ ರಂದು ಮೆಸೇಜ್ ಬಂದಿತ್ತು. ಆದರೆ ನನ್ನ ವರದಿಯನ್ನು ವೆಬ್ ಸೈಟ್ ನಲ್ಲಿ ಪಡೆಯಲು ಹೋದರೆ ಅದು ಅಪ್ ಲೋಡ್ ಆಗಿಲ್ಲ. ಈ ಬಗ್ಗೆ ಯಾರನ್ನು ಕೇಳೋದು. ನನಗೆ ಕೊರೊನಾ ಸೋಂಕು ಧೃಡ ಪಟ್ಟ ಬಳಿಕ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆ ಮಾಡಿಲ್ಲ ಎಂದು ನಟಿ ಅನುಪ್ರಭಾಕರ್ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ.. ನನಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದಿನಾಂಕ ೧೭-೦೪- ೨೦೨೧ರಂದು ಸಂದೇಶದ ಮೂಲಕ ತಿಳಿಯಿತು. ಆದರೆ ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ.
ಇದುವರೆಗೆ ನಾನು ಬಿಯು ನಂಬರ್ ಕೂಡ ಪಡೆದಿಲ್ಲ. ಅಲ್ಲದೇ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಕೂಡ ಕಾಲ್ ಮಾಡಿಲ್ಲ. ಈ ಕುರಿತಂತೆ ನಿಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ.
ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಎಂಬುದಾಗಿ ಮನವಿ ಮಾಡಿದ್ದಾರೆ.