ಕೊರೊನಾ ಪೀಡಿತರ ಸಾವು ಭಾರತಕ್ಕೆ 3ನೇ ಸ್ಥಾನ

ನವದೆಹಲಿ, ಏ.೨೮- ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವು ಹೆಚ್ಚುತ್ತಿರುವ ವೇಗಕ್ಕೆ ದೇಶ ತಲ್ಲಣಗೊಂಡಿದೆ.ಭಾರತದಲ್ಲಿ ಸೋಂಕಿನಿಂದ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ ೨ ಲಕ್ಷ ಗಡಿದಾಟಿದ್ದು ಮತ್ತಷ್ಟು ಆತಂಕ ಸೃಷ್ಠಿಸಿದೆ.

ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಈವರೆಗೆ ೫,೮೭,೩೮೪ ಮಂದಿ ,ಬ್ರೆಜಿಲ್‌ನಲ್ಲಿ ೩,೯೫,೩೨೪ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ವಿಶ್ವದಲ್ಲೇ ಸೋಂಕಿನಿಂದ ಪಟ್ಟವರ ಪಟ್ಟಿಯಲ್ಲಿ ಭಾರತ ೩ನೇ ಸ್ಥಾನ ಪಡೆದಿದೆ

ಕೊರೊನಾ ಸೋಂಕು ನಿನ್ನೆ ತುಸು ಕಡಿಮೆಯಾಯಿತು ಎನ್ನುವಾಗಲೇ ಇಂದು ಮತ್ತೊಮ್ಮೆ ದಾಖಲೆಯ ಸಾವು ಮತ್ತು ಸೋಂಕು ಧೃಡಪಟ್ಟಿದೆ. ದಿನನಿತ್ಯ ಹೆಚ್ಚುತ್ತಿರುವ ಸೋಂಕಿನಿಂದಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆ ಔಷಧಿ ಸಿಗದೆ ಜನರು ಸಾವನ್ನಪ್ಪಿರುವ ಸಂಖ್ಯೆ ಏರಿಕೆಯಾಗಿದ್ದು ಜನರು ದೇವರ ಮೇಲೆ ಭಾರ ಹಾಕಿ ಕೈ ಕಟ್ಟಿ ಕೂರುವಂತಾಗಿದೆ.

ದಿನನಿತ್ಯ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಸಾವನ್ನಪ್ಪುತ್ತಿರುವುದು ದೇಶದ ವೈದ್ಯಕೀಯ ವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ನಿದರ್ಶನವಾಗಿದೆ

ಹೊಸದಾಗಿ ೩.೬೦ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ ೩ ಸಾವಿರ ಗಡಿ ದಾಟಿದೆ .ನಿತ್ಯ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಾವು ಮತ್ತು ಕೇಂದ್ರ ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.

೩,೬೦ಲಕ್ಷ ಹೊಸ ಸೋಂಕು:

ಇಂದು ೮ ಗಂಟೆಗೆ ತನಕ ದೇಶದಲ್ಲಿ ಹೊಸದಾಗಿ ಕೊರೊನಾ ಸೋಂಕು ಸಂಖ್ಯೆ ೩,೬೦,೯೬೦ ಮಂದಿಯಲ್ಲಿ ಕಾಣಿಸಿಕೊಂಡಿದ್ದು ದಾಖಲೆಯ ಪ್ರಮಾಣದಲ್ಲಿ ಒಂದೇ ದಿನ ೩,೨೯೩ ಮಂದಿ ಸಾವನ್ಮಪ್ಪಿದ್ದಾರೆ.ಇಂದು ೨,೬೧,೧೬೨ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ಒಟ್ಟಾರೆ ಸೋಂಕಿನ ಸಂಖ್ಯೆ ೧,೭೯,೯೭,೨೬೭ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ ಇವರಿಗೆ ೧,೪೮,೧೭,೩೭೧ ಮಂದಿ ಚೇತರಿಸಿಕೊಂಡಿದ್ದಾರೆ, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೨,೦೧,೧೮೭ ಮಂದಿಗೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ ಕರ್ನಾಟಕ-ಕೇರಳ ,ಪಶ್ವಿಮ ಬಂಗಾಳ ನವದೆಹಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರಪ್ರದೇಶ ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಸಂಳ್ಯೆ ರಾಕೆಟ್ ವೇಗ ಪಡೆದುಕೊಂಡಿದೆ

೩೦ ಲಕ್ಷ ಸಕ್ರಿಯ ಪ್ರಕರಣ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಶರವೇಗದಲ್ಲಿ ಹೆಚ್ಚಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೩೦ ಲಕ್ಷ ಗಡಿ ಸಮೀಪಿಸಿದೆ

ಸದ್ಯ ದೇಶದಲ್ಲಿ ೨೯,೭೮,೭೦೯ ಮಂದಿಯಲ್ಲಿ ಸಕ್ರಿಯ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದೆ ಸೋಲುತ್ತಿದ್ದರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇರುವರೆಗೂ ೧೪,೭೮,೨೭,೩೬೭ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ದಾಖಲೆ ಏರಿಕೆ

೩,೬೦ ಲಕ್ಷ ಮಂದಿಗೆ ಹೊಸದಾಗಿ ಸೋಂಕು

ಒಂದೇ ದಿನ ದಾಖಲೆಯ ೩,೨೯೩ ಮಂದಿ ಸಾವು

ಇದುವರೆಗೂ ಮೃತಪಟ್ಟವರ ಸಂಖ್ಯೆ ೨ ಲಕ್ಷ ಗಡಿ ದಾಟಿದ ಸಾವು
ಸರಿ ಸುಮಾರಿ ೩೦ ಲಕ್ಷ ಮಂದಿಗೆ ಸಕ್ರಿಯ ಪ್ರಕರಣ

ದೇಶದಲ್ಲಿ ಈವರೆಗೆ ೧,೭೯ ಕೋಟಿ ಗೆ ಸೋಂಕು

ಇಲ್ಲಿಯವರೆಗೆ ೧,೪೮ ಕೋಟಿ ಗುಣಮುಖ

೧೪,೭೮ ಕೋಟಿ ಮಂದಿಗೆ ಲಸಿಕೆ

ನಿತ್ಯ ಹೆಚ್ಚುತ್ತಿರುವ ಸ್ವಾಮಿಯ ಮತ್ತು ಸಾವಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲ್ಲಣ