ಕೊರೊನಾ ಪರೀಕ್ಷೆ ಸ್ಥಳಾಂತರಕ್ಕೆ ಆಗ್ರಹ

ಹುಬ್ಬಳ್ಳಿ, ಮೇ 14: ಹು-ಧಾ ಮಹಾನಗರದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯ ಸೋಂಕಿತರ ಮರಣ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗಿದ್ದು, ಬೇರೆ ರೋಗಿಗಳಿಗೆ ನಿಷೇದವಿದೆ. ಇದರಿಂದ ಬಹಳ ಸಮಸ್ಯೆ ಎದುರಿಸುವವರ ಪೈಕಿ ಗರ್ಭಿಣಿಯರೂ ಹೌದು. ಹು-ಧಾ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಟಗಪ್ಪಿ ಆಸ್ಪತ್ರೆಯಲ್ಲಿ ಮಾತ್ರ ಹೆರಿಗೆ ಮಾಡಿಸಿಕೊಳ್ಳಲು ವ್ಯವಸ್ಥೆ ಇದೆ. ಆದರೆ ಅಲ್ಲಿ ಕರೋನಾ ಸೊಂಕಿತರ ಸ್ವ್ಯಾಬ್ ಟೆಸ್ಟಿಂಗ್ ಸಹ ಮಾಡಲಾಗುತ್ತಿದೆ. ಇದರಿಂದ ಗರ್ಭಿಣಿಯರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಕಾರಣ ಸೋಂಕು ತಗುಲಿ ಅವಾಂತರ ಸೃಷ್ಟಿಯಾಗುವ ಮೊದಲು ಪಾಲಿಕೆ ಆಯುಕ್ತರು ಎಚ್ಚೆತುಕೊಂಡು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೊರೊನಾ ಸ್ವ್ಯಾಬ್ ಪರೀಕ್ಷೆ ಸ್ಥಳಾಂತರಗೊಳಿಸಿ. ಗರ್ಭಿಣಿ ಹಾಗೂ ತಾಯಿಂದಿರಿಗೆ ಆರೋಗ್ಯಕರ ವಾತಾವರಣ ನಿರ್ಮಿಸಬೇಕು.

       ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೊರೋನಾ ಕಾರಣಕ್ಕೆ ಗರ್ಭಿಣಿಯರು ಭಯದಿಂದ ಪರದಾಡುತ್ತಿದ್ದು. ಸಮರ್ಪಕ ಆರೈಕೆ ಸಿಗದೆ ಹೋದರೆ ನವಜಾತ ಶಿಶುಗಳ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೂಕ್ತ ರೀತಿಯಲ್ಲಿ ಹೆರಿಗೆಯಾಗಲಿ ಎಂಬ ಉದ್ದೇಶದಿಂದ  ಗರ್ಭಿಣಿಯರಿಗೆ ವಿಶೇಷ ಆದ್ಯತೆ ನೀಡಬೇಕಿದೆ. 

 ಕೊರೋನಾ ಎರಡನೇ ಅಲೆ ಶುರುವಾದಾಗಿನಿಂದ ಅಲ್ಲಿರುವ ಗರ್ಭಿಣಿಯರಿಗೆ ಕೊರೋನಾ ಪಾಸಿಟಿವ್ ಆಗುವ ಸಾಧ್ಯತೆ ಇದೆ. ಹೀಗಾಗಿ ಹು-ಧಾ ಪಾಲಿಕೆ ಆಯುಕ್ತರು  ಎಚ್ಚೆತ್ತುಕೊಂಡು ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೊರೊನಾ ಸ್ವ್ಯಾಬ್ ಪರೀಕ್ಷೆ ಸ್ಥಳಾಂತರ ಮಾಡಬೇಕೆಂದು ಹು-ಧಾ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ನಾಗರಾಜ ಗೌರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.