ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಶಾಸಕರು..

ಸಾಸ್ವೇಹಳ್ಳಿ.ಮಾ.೨೧ : ಕೋವಿಡ್ ಲಸಿಕೆಯನ್ನು ಸರ್ಕಾರಗಳು ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸಾಸ್ವೇಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಕೋವಿಡ್ ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 45 ವರ್ಷ ಮೇಲ್ಪಟ್ಟವರಿಗೆ 60 ವರ್ಷದ ಮಧುಮೇಹ ಹಾಗೂ ರಕ್ತದೊತ್ತಡ ಇರುವವರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದ್ದು ಜನರು ಲಸಿಕೆ ಪಡೆಯುವಂತೆ ತಿಳಿ ಹೇಳಿದರು.ಕೋವಿಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮ ಉಂಟಾಗುತ್ತದೇ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೇ ಲಸಿಕೆ ಪಡೆದರೇ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲಾ ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು 71 ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯ ನೆರವು ನೀಡಿದ್ದು ದೇಶಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.ಇದೇ ವೇಳೆ ಸಾಸ್ವೇಹಳ್ಳಿ ಜಿಲ್ಲಾಪಂಚಾಯಿತಿ ಸದಸ್ಯರಾದ ವೀರಶೇಖರಪ್ಪರವರಿಗೆ ಕೋವಿಡ್ ಲಸಿಕೆ ನೀಡಲಾಯಿತು.ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಶಾಸಕರು..ಕೊರೊನಾ ಪಾಸಿಟಿವ್ ಪತ್ತೆಯಾಗುವುದಕ್ಕಿಂತ ಮುಂದೆ ಒಂಬತ್ತು ಬಾರೀ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೊನಾ ಪರೀಕ್ಷ ಮಾಡಿಸಿಕೊಂಡಿದ್ದರು. 9 ಬಾರೀ ಅವರಿಗೆ ನೆಗೆಟೀವ್ ಬಂದಿದ್ದು ಹತ್ತನೇ ಬಾರೀಗೆ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ಪಡೆದು ಬಂದ ಶಾಸಕರು ಇಂದು ರಾಂಪುರ ಗ್ರಾಮದಲ್ಲಿ ಜಿಲ್ಲಾಧಿಕಾರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ 11 ನೇ ಬಾರೀಗೆ ಮತ್ತೋಮೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ಬರ ಬೇಕಿದೆ.