ಕೊರೊನಾ ಪರೀಕ್ಷೆ ಮಾಡಿಸದೇ ಔಷಧಿ ನೀಡಬೇಡಿ; ವೈದ್ಯರಿಗೆ ಮನವಿ

ಸಾಸ್ವೇಹಳ್ಳಿ.ಮೇ.೨೧ : ಖಾಸಗಿ ಆಸ್ಪತ್ರೆಗಳ ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸದೇ ಕೆಮ್ಮು,ನೆಗಡಿ,ಜ್ವರ ಎಂದು ಬಂದ ರೋಗಿಗಳಿಗೆ ಔಷಧಿ ನೀಡಿದರೇ ಅಂತಹ ವೈದ್ಯರ ವಿರುದ್ದ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.ಸಾಸ್ವೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೊರೊನಾ ಜಾಗೃತಿ ಮೂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೈದ್ಯರು ನಮಗೆ ದೇವರ ಸಮಾನ ನಾನು ಅವರನ್ನು ಗೌರವಿಸುತ್ತೇನೆ. ಆದರೇ ಕೋವಿಡ್ ಸಂದರ್ಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸದೇ ರೋಗಿಗಳಿಗೆ ಔಷಧಿ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಸಾಸ್ವೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಖಾಸಗೀ ವೈದ್ಯರು ಕೆಮ್ಮು,ನೆಗಡಿ,ಜ್ವರ ಎಂದು ಬಂದ ರೋಗಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಿ ನಂತರ ಚಿಕಿತ್ಸೆ ನೀಡಿ ಎಂದರು.ಸಾಸ್ವೇಹಳ್ಳಿ ಮಾತ್ರವಲ್ಲದೇ ಸುತ್ತಮುತ್ತಲಿನ ಯಾವುದೇ ಖಾಸಗೀ ಆಸ್ಪತ್ರೆಯಲ್ಲಿ ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸದೇ ರೋಗಿಗಳಿಗೆ ಔಷಧಿ ನೀಡ ಬೇಡಿ ಎಂದರು.ಜೀವ ಅತ್ಯಂತ ಅಮೂಲ್ಯವಾದದ್ದು, ಜೀವವಿದ್ದರೇ ಏನು ಬೇಕಾದರೂ ಸಾಧನೆ ಮಾಡ ಬಹುದು ಅದನ್ನು ಜನರು ಅರ್ಥ ಮಾಡಿಕೊಳ್ಳ ಬೇಕು ಎಂದು ಶಾಸಕರು ಇನ್ನಾದರೂ ಜನರು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದರು.ಜನರು ಕೊರೊನಾಗೆ ತಲೆ ಕೆಡಿಸಿಕೊಳ್ಳದೇ ಇದ್ದರಿಂದ ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೇ. ಈ ಹಿನ್ನೆಲೆಯಲ್ಲಿ ಮೂರು ದಿನ ಕಟ್ಟು ನಿಟ್ಟಿನ ಲಾಕ್‌ಡೌನ್ ಮಾಡಿಸಿದ್ದು ಜನರು ಇನ್ನಾದರೂ ಲಾಕ್‌ಡೌನ್‌ಗೆ ಸಹಕಾರ ನೀಡಿ ಮನೆಯಲ್ಲಿರುವಂತೆ ಶಾಸಕರು ವಿನಂತಿಸಿಕೊAಡರು.ಇದೇ ವೇಳೆ ಸಾಸ್ವೇಹಳ್ಳಿಯ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಲಸಿಕೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಆರ್.ಐ.ಸುದೀರ್, ಗ್ರಾ.ಪಂ.ಸದಸ್ಯ ಕರಿಬಸಪ್ಪ,