ಕೊರೊನಾ ಪರೀಕ್ಷೆ ಪ್ರತಿ ಮನೆಗೆ ಅಗತ್ಯ

Cm yudiurappa inguratted the lab on wheels infront of v.soudha by rotary minster ashoka and others are seen Page 3 for City

ಬೆಂಗಳೂರು,ಮೇ ೨೭- ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಗ್ರಹಿಸಲು ಪ್ರತಿ ಮನೆ ಮನೆಯಲ್ಲೂ ಕೊರೊನಾ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿಂದು ಕೋವಿಡ್ ಟೆಸ್ಟಿಂಗ್ ಮೊಬೈಲ್ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಅರೆನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಮೊಬೈಲ್ ಪರೀಕ್ಷೆ ಮಾಡಲು ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಸಾಯಿ ಕಾರ್ಕ್ ಹೆಲ್ತ್ ಸಂಸ್ಥೆಯವರು ಸಿಎಸ್‌ಆರ್ ಅಭಿವೃದ್ಧಿಪಡಿಸಿರುವ ಕೋವಿಡ್ ಟೆಸ್ಟ್ ಮೊಬೈಲ್ ಕ್ಲಿನಿಕ್‌ನಿಂದ ಹಳ್ಳಿಗಳಲ್ಲಿ ಸೋಂಕಿತರನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ನೆರವಾಗುವ ಜತೆಗೆ ಸೋಂಕು ನಿಗ್ರಹವೂ ಸಾಧ್ಯವಾಗುತ್ತದೆ ಎಂದರು.
ಈ ಮೊಬೈಲ್ ಕ್ಲಿನಿಕ್ ೧೦-೧೨ ಗಂಟೆಗಳಲ್ಲಿ ೧ ಸಾವಿರ ಕೊರೊನಾ ಪರೀಕ್ಷೆ ತಪಾಸಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಹಳ್ಳಿಗಳಲ್ಲಿ ಯಾರಿಗೆ ಸೋಂಕು ಇದೆ ಎಂಬುದನ್ನು ಪತ್ತೆ ಹಚ್ಚುವ ಜತೆಗೆ ಸೋಂಕು ಇಳಿಕೆಯಾಗಲಿದೆ ಎಂಬ ಭಾವನೆ ತಮ್ಮದು ಎಂದರು.
ಕೊರೊನಾ ಸೋಂಕು ನಿಗ್ರಹದಲ್ಲಿ ಸರ್ಕಾರದ ಜತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನಾಗೇಂದ್ರ ಪ್ರಸಾದ್, ಕೆ.ಪಿ ನಾಗೇಶ್, ಟಾಟಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಮತ್ತಿತರರು ಇದ್ದರು.