ಕೊರೊನಾ ಪರಿಶೀಲನೆ -ಸೂಕ್ತ ಮಾರ್ಗದರ್ಶನಕ್ಕೆ ಮನವಿ

ರಾಯಚೂರು ಮೇ ೪:- ಚಾಮರಾಜ ನಗರ ಸರಕಾರಿ ಆಸ್ಪತೆಯಲ್ಲಿ ಆಕ್ಸಿಜೆನ್ ಕೊರತೆಯಿಂದ ೨೪ ಕೊರೊನಾ ಸೋಂಕಿತರ ಸಾವುಪ್ರಕರಣ ಸೇರಿದಂತೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ವ್ಯವಸ್ಥೆ ಬಗ್ಗೆ ಮೇಲ್ವಿಚಾರಣೆ ಮಾಡಿ ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆ ನೀಡುವಂತೆ ರಾಜ್ಯ ಕಾನೂನು ಸಲಹೆ ಪ್ರಧಿಕಾರದ ಅಧ್ಯಕ್ಷರಿಗೆ ನ್ಯಾಯವಾದಿ ಎನ್.ಶಿವಶಂಕರ ಅವರು ಲಿಖಿತ ಮನವಿ ಮಾಡಿದ್ದಾರೆ.
ಚಾಮರಾಜ ನಗರ ಆಸ್ಪತ್ರೆಯಲ್ಲಿ ಆಕ್ಸಿಜೆನ್ ದೊರೆಯದೆ ೨೪ ಜನ ನಿಧರಾಗಿದ್ದಾರೆ. ಈ ಪರಿಸ್ಥಿತಿ ರಾಜ್ಯ ಅನೇಕ ಕಡೆ ಇದೆ. ಜನ ಆಕ್ಸಿಜೆನ್ ಆಗಿ ಪರದಾಡುತ್ತಿದ್ದರೆ. ಕೊರೊನಾ ರೊಗಿಗಳಿಗೆ ಅತ್ಯಾಗತ್ಯವಾದ ರೆಮ್ಡಿಸಿವೆರ್ ಔಷಧಿ ಕಾಳ ಸಂತೆಯಲ್ಲಿ ೩೦ ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ಖಾಸಗಿ ಆಸ್ಪತ್ರೆಗಳ ಕೊರೊನಾ ಪರಿಸ್ಥಿತಿಯನ್ನು ಹಣ ಮಾಡಲು ಬಳಿಸಿಕೊಳ್ಳುತ್ತಿದ್ದಾರೆ. ಬಡ್ ಖಾಲಿ ಇದ್ದರು ಇವನ್ನು ಬ್ಲಾಕ್ ಮಾಡು ವ್ಯವಸ್ಥೆ ಮಾಡಲಾಗಿದೆ. ಉಳ್ಳವರಿಗೆ ಮಾತ್ರ ಬೆಡ್ ನೀಡಲಾಗುತ್ತಿದೆ. ಕಳೆದ ವರ್ಷ ತುಮಕೂರು ರಸ್ತೆಯಲ್ಲಿ ಮೂರು ಸಾವಿ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಈಗ ಈ ವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.ಕೊರೊನಾಕ್ಕೆ ಸಂಬಂಧಿಸಿ ಅನೇಕ ಸಮಸ್ಯೆಗಳಿವೆ. ಕಳೆದ ವರ್ಷ ಪ್ರಾಧಿಕಾರ ಎಲ್ಲೆಡೆ ಭೇಟಿ ನೀಡಿ ಪರಿಶೀಲಿಸಿ ಕಾಳಕಾಲಕ್ಕೆ ಆಡಳಿತಕ್ಕೆ ಸೂಕ್ತ ಸಲಹೆ ನೀಡಿತ್ತು. ಈಗ ಅದೇ ರೀತಿಯಲ್ಲಿ ಪ್ರಾಧಿಕಾರ ಪರಿಶೀಲಿಸಿ ಅಗತ್ಯವಿದೆ ಎಂದು ಮನವಿ ಮಾಡಿದ್ದರೆ. ಚಾಮರಾಜ ನಗರ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.