ಕೊರೊನಾ ನಿವಾರಣೆಗಾಗಿ ಪ್ರಾರ್ಥನೆ

ಜಗಳೂರು.ಮೇ.೧; ದೇಶ ವ್ಯಾಪ್ತಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್  ನಿಂದ ರಕ್ಷಿಸಿ ಜನಸಾಮಾನ್ಯರನ್ನ ಕಾಪಾಡುವ ಮೂಲಕ‌ ಸಹಜಸ್ಥಿತಿ ಮರಳಲಿ ಎಂದು ಶ್ರೀ ಆಂಜನೇಯ ದೇವರ ಮೊರೆಹೋಗುವ ಮೂಲಕ ಬ್ಲಾಕ್ ಕಾಂಗ್ರೆಸ್ ನ ಮುಂಚೂಣಿ ಘಟಕಗಳ ಪಧಾದಿಕಾರಿಗಳು  ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು .ಪಟ್ಟಣದ ಹೊರವಲಯದ ಹರ್ಷತ್ ಕಾಲೇಜ್ ಹಿಂಭಾಗದ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ ಈಗಾಗಲೇ ರಾಜ್ಯಾದ್ಯಂತ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದೆ ಬಡವರು ಶ್ರೀಮಂತರು ಕಾರ್ಮಿಕರು ಎನ್ನದೆ ಎಲ್ಲರನ್ನು ಭಾದಿಸುತ್ತಿದ್ದೆ ಕ್ಷೇತ್ರ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಅವರು ಕೊರೋನಾ ಸೋಂಕಿನಿಂದ ದಾವಣಗೆರೆ ಜಿಲ್ಲಾ ಆಸ್ವತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದು  ಶೀಘ್ರವೇ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ ತಾಲ್ಲೂಕಿನಲ್ಲಿ ಕೋರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದೆ ಲಾಕ್ ಡೌನ್ ನಿಯಮ ಪಾಲಿಸುವ ಮೂಲಕ ಎಲ್ಲರೂ ಸ್ಪಂದಿಸಿ ಜಾಗೃತಿ ವಹಿಸಬೇಕಿದೆ  ತಾಲ್ಲುಕಿನಲ್ಲಿ ನಮ್ಮ ಜನಪ್ರಿಯ ನಾಯಕರು ಮಾಜಿ ಶಾಸಕರು ಹೆಚ್.ಪಿ.ರಾಜೇಶ್ ಅವರು ಸೇರಿದಂತೆ ಕೊರೋನಾ ಸೋಂಕಿನಿಂದ ಬಳಲುವಂತ ಪ್ರತಿಯೊಬ್ಬರು ಶೀಘ್ರವೇ ಗುಣಮುಖರಾಗಿ ಬರಲಿ ಎಂದು ವೀರಾಂಜನೇಯ ದೇವರಿಗೆ ಭಕ್ರಿಪೂರ್ವಕವಾಗಿ ಬೇಡಿಕೊಳ್ಳುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಟಿ.ತಿಪ್ಪೇಸ್ವಾಮಿ ವಿಜಯ್ ಕೆಂಚೋಳ್ ಕಾರ್ಮಿಕ ಘಟಕ ಅಧ್ಯಕ್ಷ ಪಿ.ರೇವಣ್ಣ ಉಪಾಧ್ಯಕ್ಷ ರೇಣುಕೇಶ್ ಕಾರ್ಯದರ್ಶಿ ಕರಿಯಪ್ಪ ಯುವ ಮುಖಂಡರಾದ ಆದರ್ಶ ರೆಡ್ಡಿ ಗೌಡಿಕಟ್ಟೆ ಬೊಮ್ಮುಲಿಂಗ ಜಿ.ಈ.ರಮೇಶ್ ಸೇರಿದಂತೆ ಹಲವರು ಇದ್ದರು