ಕೊರೊನಾ ನಿರ್ವಹಣೆ: ಕರ್ನಾಟಕ, ಮಹಾನಗರಗಳ ಪೈಕಿ ಬೆಂಗಳೂರು ಕಳಪೆ ಸಾಧನೆ

ನವದೆಹಲಿ, ಸೆ 15- ದೇಶದಲ್ಲಿ ಪ್ರತಿನಿತ್ಯ ಕೊರೊನಾ ವೈರಾಣು ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು,ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಹಾಗೂ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಮುಂಬರುವ ದಿನಗಳಲ್ಲಿ ಎರಡನೇ ಹಂತದಲ್ಲಿ ಸೋಂಕಿನ ಪ್ರಮಾಣ ದೇಶದಲ್ಲಿ ಹೆಚ್ಚಳವಾಗುವ ಬಗ್ಗೆ ತಜ್ಞರು ಸುಳಿವು ನೀಡಿರುವ ಹೊತ್ತಿನಲ್ಲೇ ಕಳಪೆ ಪಟ್ಟಿಗೆ ಸೇರ್ಪಡಯಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕರ್ನಾಟಕದಲ್ಲಿ ಸೋಂಕಿನ ಪ್ರಕರಣ ಅಪಾಯಕಾರಿ ಹಂತದಲ್ಲಿದ್ದು, ಸಕ್ರಿಯ ಪ್ರಕರಣಗಳಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ 2,91,256 ಸಕ್ರಿಯ ಪ್ರಕರಷಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ 98,463 ಮಂದಿಯಲ್ಲಿ ಸೋಂಕು
ಜೀವಂತವಾಗಿದ್ದು ಎರಡನೇ ಸ್ಥಾನದಲ್ಲಿದೆ. ಮೂನರೇ ಸ್ಥಾನದಲ್ಲಿ ಆಂಧ್ರಪ್ರದೇಶವಿದ್ದು 93,204 ಸಕ್ರಿಯ ಪ್ರಕರಣಗಳಿದರೆ ಉತ್ತರ ಪ್ರದೇಶದಲ್ಲಿ 67,287 ಸಕ್ರಿಯ ಪ್ರಕರಣಗಳಿವೆ.
ಮಹಾನಗರಗಳ ಪೈಕಿ ಪುಣೆ
ಸಕ್ರಿಯ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪುಣೆಯಲ್ಲಿ ಒಟ್ಟು 2,35,419 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 78,284 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಒಟ್ಟು 1,73,628 ಮಂದಿ ಕೊರೊನಾಗೆ ತುತ್ತಾಗಿದ್ದು, 40,527 ಸಕ್ರಿಯ ಪ್ರಕರಣ ಜೀವಂತವಾಗಿದೆ.