ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ; ಅವಿನಾಶ ಜಗನ್ನಾಥ ಆರೋಪ

ಯಾದಗಿರಿ:ಮೇ.18: ಜಿಲ್ಲೆಯಲ್ಲಿ ಕರೋನ ಮಹಾಮಾರಿಯ ಎರಡನೇಯ ಅಲೆ ಅಟ್ಟಹಾಸ ಮೆರೆಯುತ್ತಿದ್ದರೂ ಜಿಲ್ಲಾಡಳಿತ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಅವಿನಾಶ ಜಗನ್ನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಈದೀಗ ಗ್ರಾಮೀಣ ಭಾಗದಲ್ಲಿ ತನ್ನ ಬಾಹುಬಂಧನಗಳನ್ನು ಚಾಚಿದೆ . ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ನನ್ನನ್ನು ಸೇರಿದಂತೆ ಜಿಲ್ಲೆಯ ಜನರಲ್ಲಿ ಆಕ್ರೋಶ ಉಕ್ಕುವಂತ ಮಾಡುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದ್ದು, ನೂತನ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ . ಆದರೆ ಅಲ್ಲಿನ ಸೋಂಕಿತರ ಪರಿಸ್ಥಿತಿ ಕೇಳಿದ್ರೆ ನಿಜಕ್ಕೂ ಕಣ್ಣಲ್ಲಿ ನೀರುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸದರಿ ಆಸ್ಪತ್ರೆಯಲ್ಲಿ ಮೊದಲು ಇದ್ದಷ್ಠೇ ಅಂದರೆ 300 ಹಾಸಿಗೆ 25 ವೆಂಕಟಿಲೇಟರುಗಳಿವೆ ಹೆಚ್ಚಿನದಾಗಿ ಏನನ್ನೂ ಮಾಡದೇ ಕೊರೊನಾ ಒಂದನೇ ಹಾಗೂ ಎರಡನೇ ಅಲೆಯನ್ನು ನಿರ್ವಹಣೆ ಮಾಡುತ್ತಿರುವುದಾಗಿ ಹೇಳುತ್ತಿರುವ ಆಡಳಿತ ಹಗರಣದಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದರು.
ಆಸ್ಪತ್ರೆಯ್ಲಲಿ ಆಮ್ಲಜನಕ ಬೇಡ್ ಮತ್ತು ವೆಂಟಿಲೇಟರ್ ಗಳ, ಕೊರತೆಯಿದೆ ಆದರೆ ಸಣ್ಣಪುಟ್ಟ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ವಿಫಲವಾಗಿರುವುದು ವಿಪರ್ಯಾಸದ ಸಂಗತಿ ಎಂದು ಅವರು ದೂರಿದರು.
ಸೋಂಕಿತರಿಗೆ ಕುಡಿಯುವ ನೀರು ಸಹ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ಸ್ವಚ್ಚತೆ ಮರಿಚೀಕೆಯಾಗಿದೆ. ಇನ್ನೂ ವೈದ್ಯರು, ನರ್ಸ್‍ಗಳು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ
ಆಸ್ಪತ್ರೆಗೆ ವೈದ್ಯರ ಕೊರತೆ ಸಹ ಇದೆ . ಇಂತಹ ಮೂಲಭೂತ ಸೌಕರ್ಯಗಳ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಆಸ್ಪತ್ರೆಯಲ್ಲಿ ನಕರದ ಪರಿಸ್ಥಿತಿ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಸೋಂಕಿನ ಪ್ರಮಾಣವನ್ನು ಪತ್ತೆಹಚ್ಚಲು ಈ ಸಿಟಿ ಸ್ಕ್ಯಾನಿಂಗ್ ಬಹಳಷ್ಟು ಮುಖ್ಯ ಆದರೆ ಯಾದಗಿರಿಯಲ್ಲಿ ಸಿಟಿ ಸ್ಕ್ಯಾನಿ ನಿಂಗ್ ವ್ಯವಸ್ಥೆ ಅಧೋಗತಿಗೆ ಇಳಿದಿದೆ.
ಕೇವಲ ಕಾಟಾಚಾರಕ್ಕೆ ಸರ್ಕಾರಿ ಹಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನ್ನು ಸಂಜೆ 8 ರಿಂದ ಸೋಂಕಿತರ ಸ್ಕ್ಯಾನಿಂಗ್ ಸಮಯ ನಿಗದಿಮಾಡಲಾಗಿದೆ. ಆದರೆ ನಮ್ಮಲ್ಲಿ ಸೋಂಕಿತರ ಸಂಖ್ಯೆ ದಿನಕ್ಕೆ 300 ದಾಟುತ್ತಿದೆ. ಇನ್ನು ವಿಶೆಷವೆಂದರೆ ಸುಮಾರು 100 ಕಿ.ಮೀ ದೂರದಿಂದ ಗ್ರಾಮೀಣ ಪ್ರದೇಶದಿಂದ ಬಂದವರು ರಾತ್ರಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಊರಿಗೆ ಯಾವಾಗ ಹೋಗಿ ತಲುಪಬೇಕು ಎಂದು ಅವರು ಪ್ರಶ್ನಿಸಿದರು.
ಇದರ ನಡುವೆ ಖಾಸಗಿ ಸ್ಮಾ ನಿಂಗ್ ಸೆಂಟರ್ ಸಹ ಜನರದಿಂದ ಹಣ ಕೀಳಲು ನಿಂತಿವೆ ಇವರಿಗೆ ಅನುಕೂಲ ಮಾಡಿಕೊಡಲೆಂದೇ. ಸಮಯ ನಿಗದಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಕೂಡಲೇ ಮತ್ತೊಂದು ಸರ್ಕಾರಿ ಸಿಟಿ ಸ್ಕ್ಯಾನಿಂಗ್ ಸೆಂಟರ್ ಜಿಲ್ಲಾಡಳಿತ ಆರಂಭಿಸಬೇಕು. ಅಲ್ಲಿಯ ತನಕ ಬೆಳಗ್ಗೆ ಮತ್ತು ಸಂಜೆ ಎರಡು ಶಿಫ್ಟ್ ನಲ್ಲಿ ಸೋಂಕಿತರ ಸ್ಕ್ಯಾನಿಂಗ್ ಮಾಡಬೇಕು ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿ ನಮ್ಮ ಜಿಲ್ಲೆಯನ್ನು ಕರೋನದಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಶೀಘ್ರ ಕಾಂಗ್ರೆಸ್ ನಿಂದ ಪ್ರತಿಭಟನೆ: ಕಾಂಗ್ರೆಸ್ ಪಕ್ಷ ಸರ್ಕಾರ ಹಾಗೂ ಜಿಲ್ಲಾಡಳಿತ ವೈಫಲ್ಯದ ವಿರುದ್ಧ ಶೀಘ್ರ ಹೋರಾಟ ನಡೆಸಲಿದೆ ಎಂದು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿರೋಧ ಪಕ್ಷ ಏಕೆ ದನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದಾಗ ಪಕ್ಷದ ಗಮನಕ್ಕೆ ಬಂದಿದೆ ಈ ಎಲ್ಲ ಸಮಸ್ಯೆ ಇಟ್ಟುಕೊಂಡು ಶೀಘ್ರ ಕಾಂಗ್ರೆಸ್ ರಚನಾತ್ಮಕ ಹೋರಾಟ ನಡೆಸಲಿದೆ ಎಂದು ಅವರು ಸಮಜಾಯಿಷಿ ನೀಡಿದರು.