ಕೊರೊನಾ ನಿರೋಧಕ ಕಿಟ್ ವಿತರಣೆ

ಗದಗ ಜೂ.6: ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿಯವರಾದ ಡಾ. ಸುಜಾತಾ ಪಾಟೀಲ್ ರವರು ಕೊರೊನಾ ರೋಗ ನಿರೋಧಕ ಕಿಟ್‍ನ್ನು ಭ್ರಷ್ಟಾಚಾರ ನಿಗ್ರಹ ದಳ ಠಾಣೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ವಿತರಿಸಿದರು. ರೋಗ ನಿರೋಧಕ ಕಿಟ್ ಅರ್ಕ್ ಅಜೀಬ್ ಡ್ರಾಪ್ಸ್ , ಚವನ್‍ಪ್ರಾಶ, ಸಂಶಮನವಟಿ ಅಶ್ವಗಂಧವಟಿಯನ್ನು ಒಳಗೊಂಡಿರುತ್ತದೆ ಎಂದು ಡಾ. ಸುಜಾತಾ ಪಾಟೀಲ ನುಡಿದರು. ಹಾಗೂ ಅದನ್ನು ಉಪಯೋಗಿಸುವ ಕುರಿತು ಸೂಕ್ತ ತಿಳುವಳಿಕೆ ನೀಡಿದರು.
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪ್ರಭಾರ ಪೆÇಲೀಸ್ ಉಪಾಧೀಕ್ಷ ಆರ್.ಎಫ್.ದೇಸಾಯಿ, ಪೆÇಲೀಸ್ ನಿರೀಕ್ಷಕ ವ್ಹಿ.ಎನ್. ಹಳ್ಳಿ ಹಾಗೂ ಡಾ.ಮಹೇಶ.ಜಿ.ಹಿರೇಮಠ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.