ಕೊರೊನಾ ನಿಯಮ ಪಾಲನೆ ಸಭೆ-ಸಮಾರಂಭಗಳಿಗೆ ಏಕಿಲ್ಲ

ಮಂಗಳೂರು, ಮಾ.೨೫- ಕೊರೋನ ನಿಯಂತ್ರಣ ಸಲುವಾಗಿ ಜಿಲ್ಲಾಧಿಕಾರಿಯಿಂದ ಜಾಗೃತಿ ಮೂಡಿಸುವ ಕೆಲಸ ಸರಿಯಾಗಿದ್ದರೂ, ಸಭೆ ಸಮಾರಂಭಗಳಿಗೆ ಅದನ್ನೇಕೆ ಅನ್ವಯಿಸುವುದಿಲ್ಲ ಎಂದು ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಯವರು ಏಕಾಏಕಿಯಾಗಿ ಅಂಗಡಿ, ಪೆಟ್ರೋಲ್ ಪಂಪ್‌ಗಳು, ಬಸ್ಸುಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕುವ, ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಅದೇ ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ ಇಲ್ಲದೆ, ಸುರಕ್ಷಿತ ಅಂತರವಿಲ್ಲದೆ ನಂದಿನಿ ನದಿ ಉತ್ಸವದಲ್ಲಿ ಭಾಗವಹಿಸಿದ್ದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಯವರು ಕೆಲವೆಡೆ ಭೇಟಿ ನೀಡಿ ಸಂದರ್ಭ ಯುವಕರನ್ನು ಜೀಪಿಗೆ ಹಾಕುವುದು, ಅವರ ಜತೆ ಉಗ್ರರ ರೀತಿಯಲ್ಲಿ ನಡೆದುಕೊಂಡಂತೆ ಭಾಸವಾಗಿದೆ. ಅಲ್ಲಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಯಮ ಪಾಲನೆ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಈ ರೀತಿ ವೈಯಕ್ತಿಕವಾಗಿ ಕ್ರಮದ ಬಗ್ಗೆ ಖಂಡಿಸುವು ದಾಗಿ ಅವರು ಹೇಳಿದರು. ಸಂಸದ ನಳಿನ್ ಕುಮಾರ್‌ರವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಮೂಲಕ ಆಸ್ಪತ್ರೆ ಪರ ಜಾಹೀರಾತು ನೀಡುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದ ಪ್ರತಿಭಾ ಕುಳಾಯಿ, ಸರಕಾರಿ ಆಸ್ಪತ್ರೆಯ ಲಸಿಕೆ ಮೇಲೆ ಅವರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.