ಕೊರೊನಾ ನಿಯಮ ಉಲ್ಲಂಘನೆ : ನಗರದ ೨೪ ವ್ಯಾಪಾರಿಗಳ ವಿರುದ್ಧ ಎಫ್‌ಐಆರ್

 • ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸದಿದ್ದರೇ ಕಠಿಣ ಕ್ರಮ – ಎಚ್ಚರಿಕೆ
  ರಾಯಚೂರು.ಏ.೨೭- ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಉಲ್ಲಂಘನೆ, ಕೊರೊನಾ ಹರಡುವುದನ್ನು ತಡೆಯಲು ಅಸಹಕಾರ ತೋರಿದ ನಗರದ ೨೪ ವ್ಯಾಪಾರಿಗಳ ವಿರುದ್ಧ ಸದಾರ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
  ಇಂದು ಸಹ ೬೨೪ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ರಾಯಚೂರು ತಾಲೂಕಿನಲ್ಲಿ ೨೩೫, ಸಿಂಧನೂರು ೯೯, ಮಾನ್ವಿ ೧೧೨, ದೇವದುರ್ಗ ೧೫೭, ಲಿಂಗಸೂಗೂರು ೨೧ ಪ್ರಕರಣಗಳು ಪತ್ತೆಯಾಗಿದ್ದು, ಜನರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಕಡ್ಡಾಯ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಏ.೨೬ ರಂದು ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆಯ ಪ್ರಕರಣ ಪರಿಶೀಲನೆ ಸಂದರ್ಭದಲ್ಲಿ ಅನೇಕ ಕಡೆ ಕೊರೊನಾ ನಿಯಮ ಉಲ್ಲಂಘನೆ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
  ಸ್ವತಃ ನಗರಸಭೆ ಪೌರಾಯುಕ್ತ ವೆಂಕಟೇಶ ಅವರು ಸದಾರ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ. ಮುಂಜಾನೆ ೧೧ ಗಂಟೆಯಿಂದ ೧ ಗಂಟೆವರೆಗೆ ಅನಗತ್ಯವಾಗಿ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿವಂತೆ ಮಾಡುವುದರೊಂದಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಕಲಂ ೨೬೯, ೨೭೦ ಹಾಗೂ ಕಲಂ ೫ (೧) ಕರ್ನಾಟಕ ಎಪಿಡಾಮಿಕ್ ಡೀಸಿಸ್ ಆಕ್ಟ್ ೨೦೨೦ ಅಡಿ ಪ್ರಕರಣ ದಾಖಲಿಸಲಾಗಿದೆ.
  ಎಫ್‌ಐಆರ್ ದಾಖಲಾದ ಅಂಗಡಿ ಮತ್ತು ಮಾಲೀಕರ ಹೆಸರು ಈ ಕೆಳಗಿನಂತಿದೆ. ಬಟ್ಟೆ ಬಜಾರ್‌ನ ೧) ಎಸ್.ಸಿ.ಕೀರ್ತಿ ಆಂಡ್ ಸನ್ಸ್ ಮಾಲೀಕರಾದ ಅಮೃತ್ ಕೀರ್ತಿ, ೨) ಅಲಿಬಾಯಿ ಗೋಗಿ ಗಾರ್ಮೆಂಟ್ಸ್, ೩) ವಿನಯ್ ಕಿರಣ್ ಸ್ಟೋರ್‌ನ ಗೋವಿಂದ ರಾಜ್, ೪) ಡಾಟ್ಲಾ ಡ್ರಾಸಸ್‌ನ ಅಪ್ಪಿರೆಡ್ಡಿ, ೫) ರಾಘವೇಂದ್ರ ಹೋಟೆಲ್‌ನ ಮಹೇಶ, ೬) ಕರ್ನಾಟಕ ಮೆಡಿಕಲ್‌ನ ಜಾಫರ್ ಅಲಿ, ೭) ಡಾಕ್ಟರ್ ಬ್ಯಾಕ್ ಮ್ಯಾಟ್ರಿನ್ ಯೂನಿಕ್ ಎಂಟರ್ ಪ್ರೈಸಸ್‌ನ ಜಾಕೀರ್, ೮) ಬಂಗಿ ಕುಂಟಾದ ಸಾಕ್ಷಿ ಸಾರಿಸ್‌ನ ಶರಣಗೌಡ, ೯) ವರ್ಧಮಾನ ಕಂಫರ್ಟ್ಸ್ ಪ್ರೈ ಲಿ, ೧೦) ಹೋಸೈರ್ ಆಂಡ್ ಹ್ಯಾಂಡ್‌ಲ್ಯೂಮ್ಸ್ ಆಸೀಸ್‌ನ ಶ್ರೀಧರ್, ೧೧) ಜೈನ್ ಕಾಲೋನಿಯ ನರೇಶ ಬೋಹರಾ ರಿಶಬ್ ಬೋಹರಾ, ೧೨) ಬಂಗಿಕುಂಟಾದ ವಿಷ್ಣು ರಿಕ್ರಿಯೇಷನ್, ೧೩) ಬಂಗಿಕುಂಟಾದ ವಿಜಯ್ ಸಿಂಗ್, ೧೪) ಚಂದ್ರಮೌಳೇಶ್ವರ ವೃತ್ತದ ರಮಾಕಾಂತ್ ಡಿಜಿಟಲ್ ಶಾಪ್, ೧೫) ವಾಸವಿ ಆಪ್ಟಿಕಲ್ಸ್‌ನ ದಿನೇಶ ಕುಮಾರ, ೧೬) ಗುರು ಖಾದಿ ಭಂಡಾರನ ಸೋಮಶೇಖರ, ೧೭) ರಿಲಯನ್ಸ್ ಟೈಯರ್‌ನ ಖಾಜಾ ಹುಸೇನ್, ೧೮) ರಿಶಬ್ ಕೋಠಾರಿ ಎಲೆಕ್ಟ್ರಿಕಲ್ಸ್, ೧೯) ವಾಸವಿ ಡಿಜಿಟಲ್ ರಾಜು, ೨೦) ವಿಶ್ವನಾಥ ಮೆಡಿಕಲ್ಸ್, ೨೧) ನಂದಿ ಸ್ಪೆಷಲ್ ಲಸ್ಸಿ, ೨೨) ಡಿಎಝೆಡ್ ಎಂಟರ್ ಪ್ರೈಸಸ್, ೨೩) ನ್ಯೂ ಎವರ್ ಗ್ರೀನ್ ಹೇರ್ ಕಟ್ಟಿಂಗ್, ೨೪)ಹೆಚ್.ಎಂ.ಗ್ರಾಫಿಕ್‌ನ ಸುದರ್ಶನ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
  ನಿನ್ನೆ ಒಂದೇ ದಿನ ೨೪ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊರೊನಾ ಎರಡನೇ ಅಲೆ ನಂತರ ಇದು ಪ್ರಥಮ ಎಫ್‌ಐಆರ್ ದಾಖಲೆ ಪ್ರಕರಣವಾಗಿದೆ. ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಲಾಕ್ ಡೌನ್ ಮತ್ತು ಕೊರೊನಾ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎನ್ನುವುದಕ್ಕೆ ಈ ಎಫ್‌ಐಆರ್ ದಾಖಲು ನಿದರ್ಶನವಾಗಿದೆ.