ಕೊರೊನಾ ನಿಯಮಾನುಸಾರ ವ್ಯಾಪಾರ ಮಾಡಿ

ನವಲಗುಂದ,ಏ24 : ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯಿಂದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದ್ಯಂತ ಮುನ್ನೇಚ್ಚರಿಕೆ ಕ್ರಮಗಳನ್ನು ಪಾಲಿಸಲು ತಾಲೂಕಾಡಳಿತಕ್ಕೆ ಆದೇಶವಿದ್ದು ಪಟ್ಟಣದಲ್ಲಿ ವರ್ತಕರು, ತರಕಾರಿ ವ್ಯಾಪಾರಸ್ಥರು ಜನಜಂಗುಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಿಯಮಗಳ ಪಾಲನೆ ಪ್ರತಿಯೊಬ್ಬರು ಪಾಲಿಸಬೇಕೆಂದು ತಹಶೀಲ್ದಾರ ಪ್ರಕಾಶ ಹೊಳೆಯಪ್ಪಗೌಡ್ರ ಶುಕ್ರವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ವರ್ತಕರ ಸಭೆಯಲ್ಲಿ ತಿಳಿಸಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಿಂದ ಸಾರ್ವಜನಿಕರು ಹಾಗೂ ತರಕಾರಿ ವ್ಯಾಪಾರಸ್ಥರಲ್ಲಿ ಸಾಮಾಜಿಕ ಅಂತರ ಇಲ್ಲದೇ ಕೋರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತರಕಾರಿ ವ್ಯಾಪಾರಸ್ಥರು ಪಟ್ಟಣದ ಎ.ಪಿ.ಎಮ್.ಸಿ ಆವರಣದಲ್ಲಿಯೇ ಸ್ಥಳಾಂತರ ಮಾಡಿ ನಿಯಮಾನುಸಾರ ವ್ಯಾಪಾರ ಮಾಡಬೇಕೆಂದು ಹೇಳಿದರು.
ಸಿ.ಪಿ.ಐ ಚಂದ್ರಶೇಖರ ಮಠಪತಿ ಮಾತನಾಡಿ ಕಿರಾಣಿ, ತರಕಾರಿ ವ್ಯಾಪಾರ ವಹಿವಾಟು ಪ್ರತಿ ಶನಿವಾರ, ಭಾನುವಾರ ಲಾಕಡೌನ ಇರುವುದರಿಂದ ಸಂಪೂರ್ಣ ಬಂದ್ ಮಾಡಿ ನಿಯಮಗಳನ್ನು ಪಾಲನೆ ಮಾಡಬೇಕು ಉಳಿದ ದಿನ ಸಮಯಕ್ಕೆ ಸರಿಯಾಗಿ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು. ತಮ್ಮ ಅಂಗಡಿಯಲ್ಲಿ ಗ್ರಾಹಕರ ಜೊತೆ ಸಾಮಾಜಿಕ ಅಂತರ, ಮಾಸ್ಕ ಧರಿಸಿಕೊಂಡು ಬರುವಂತೆ ಮುನ್ನೇಚ್ಚರಿಕೆ ವಹಿಸಿದಾಗ ಮಾತ್ರ ಈ ಮಹಾಮಾರಿಯನ್ನು ಹೊಗಲಾಡಿಸಲು ಸಾದ್ಯವೆಂದು ಹೇಳಿದರು.
ಸಾರ್ವಜನಿಕರು ಸ್ವಯಂಕೃತವಾಗಿ ಲಾಕಡೌನ ನಿಯಮಾವಳಿಗಳನ್ನು ಪಾಲನೆ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಾಗೃತಿಕೊಳ್ಳುವುದು ಅವಶ್ಯವಾಗಿದೆ. ನಿಯಮಗಳನ್ನು ಪಾಲನೆಯಾಗದಿದ್ದರೆ ಕಠಿಣ ಕ್ರಮಗಳನ್ನು ವಹಿಸಬೇಕುತ್ತದೆ. ಅದಕ್ಕೆ ಅವಕಾಶ ಮಾಡಬಾರದೆಂದು ಹೇಳಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಆರ್.ಎನ್.ಧಾರವಾಡ, ಅಣ್ಣಪ್ಪ ಬಾಗಿ, ಗ್ರೇಡ್-2 ತಹಶೀಲ್ದಾರ ಎಮ್.ಜಿ.ಹೊಗ್ರಾಣಿ, ಪಿ.ಎಸ್.ಐ ಜಯಪಾಲ ಪಾಟೀಲ ಇತರರು ಇದ್ದರು.