ಕೊರೊನಾ ನಿಯಂತ್ರಿಸಿ ಟ್ರಂಪ್‌ಗೆ ಬೈಡೆನ್ ಮನವಿ

ವಾಷಿಂಗ್ಟನ್, ನ.೧೪- ಅಮೆರಿಕದಲ್ಲಿ ಪ್ರತಿದಿನ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ತಕ್ಷಣ ಪ್ರಸ್ತುತ ಆಡಳಿತ ಕಾರ್ಯೋನ್ಮುಖರಾಗಬೇಕು ಅಗತ್ಯವಿದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಸೋಂಕು ತಡೆಗಟ್ಟಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು. ಹೊಸ ಸರ್ಕಾರ ಸೋಂಕು ನಿರ್ವಹಿಸಲಿ ಎಂದು ಸುಮ್ಮನೆ ಕೂರಬಾರದು ಎಂದು ಸೂಚನೆ ನೀಡಿದ್ದಾರೆ.

ಜನವರಿ ೨೦ರ ತನಕ ತಾವು ಚುನಾಯಿತ ಅಧ್ಯಕ್ಷ ಆನಂತರ ಅಧಿಕಾರ ಸ್ವೀಕರಿಸಿದ ಬಳಿಕ ಸೋಂಕು ನಿರ್ವಹಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ತಮ್ಮ ನೇತೃತ್ವದ ಆಡಳಿತ ಮಾಡಲಿದೆ ಅಲ್ಲಿಯತನಕ ಹಾಲಿ ಇರುವ ಡೋನಾಲ್ಡ್ ನೇತೃತ್ವದ ಸರ್ಕಾರ ಸೋಂಕು ನಿರ್ವಹಣೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಹೊಸ ಸರ್ಕಾರ ಬರುವತನಕ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಸ್ತುತ ಆಡಳಿತ ಯಾವುದೇ ಕಾರಣಕ್ಕೂ ತಡಮಾಡದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಇದರಲ್ಲಿ ಹಿಂದೆ ಸರಿಯಬಾರದು ಎಂದು ಅವರು ಸಲಹೆ ನೀಡಿದ್ದಾರೆ.

೧೨ ಸದಸ್ಯರ ಟಾಸ್ಕ್ ಪೋರ್ಸ್ ರಚನೆ:

ಜನವರಿ ೨೦ರ ಬಳಿಕ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬೈಡನ್ ಅವರು ಈಗಾಗಲೇ ಸೋಂಕು ನಿರ್ವಹಣೆಗೆ ಅಗತ್ಯವಿರುವ ತಂಡವನ್ನು ರಚಿಸಿದ್ದಾರೆ ಇದಕ್ಕಾಗಿ ೧೨ ಜನರ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೇತೃತ್ವದ ಸರ್ಕಾರಕ್ಕೆ ಅಗತ್ಯ ಸಲಹೆ ಮಾರ್ಗದರ್ಶನ ನೀಡಲಿದೆ.

ಟಾಸ್ಕ್ ಫೋರ್ಸ್ ಈಗಿನಿಂದಲೇ ಕಾರ್ಯೋನ್ಮುಖರಾಗುವ ಜೊತೆಗೆ ಜನವರಿಯಿಂದ ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಸಲಹೆ ನೀಡಿದರು.

ಸೋಂಕಿಗೆ ಲಸಿಕೆ ಬರುವತನಕ ದೇಶದ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮಾಸ್ಕ್ ಧರಿಸಬೇಕು. ಆದಷ್ಟು ಗುಂಪು ಸೇರುವುದನ್ನು ತಡೆಗಟ್ಟಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ

೧.೧ಕೋಟಿ ಮಂದಿಗೆ ಸೋಂಕು:

ಅಮೆರಿಕದಲ್ಲಿ ಕರೋನೋ ಸಂಖ್ಯತರ ಸಂಖ್ಯೆ ೧ ಕೋಟಿ ೧೦ ಲಕ್ಷಕ್ಕೂ ಅಧಿಕವಾಗಿದೆ.
ಸೋಂಕಿನಿಂದ ಇದುವರೆಗೂ ಸರಿಸುಮಾರು ೨.೫೦ ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಹೀಗಾಗಿ ಸೋಂಕು ನಿಯಂತ್ರಣಕ್ಕೆ ತಕ್ಷಣ ಅಗತ್ಯವಿರುವ ಕಾರ್ಯತಂತ್ರವನ್ನು ರೂಪಿಸುವಂತೆ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರಕ್ಕೆ ಸೂಚನೆ ನೀಡಿದ್ದಾರೆ

ಟ್ರಂಪ್ ವಿಫಲ

ಅಮೆರಿಕದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮಾಡುವಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಆರಂಭದಿಂದಲೂ ಮುನ್ನೆಚ್ಚರಿಕೆ ವಹಿಸದಿರುವುದು ಮತ್ತು ನಿರ್ಲಕ್ಷ ಮನೋಭಾವನೆ ತೆಳೆದಿದ್ದೇ ಅವರ ಸೋಲಿಗೆ ಕಾರಣವಾಗಿದೆ ಈ ಮೂಲಕ ಅಮೆರಿಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ