ಕೊರೊನಾ ನಿಯಂತ್ರಿಸಲು ಮಾಸ್ಕ್ ಕಡ್ಡಾಯವಾಗಿ ಧರಿಸಿ

ಮುದ್ದೇಬಿಹಾಳ:ನ.12: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವದು ಅಸಾದ್ಯವಾದ ಕೆಲಸವೆನಲ್ಲ ಸಾರ್ವಜನಿಕರು ಕೊರೊನಾ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ ಮನೆಯಿಂದ ಹೋರ ಬರುವ ಮುನ್ನ ಪ್ರತಿಯೋಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಹೇಳಿದರು.
ಪಟ್ಟಣದಲ್ಲಿ ಬುದುವಾರ ನ್ಯಾಯಾಲಯ ಸಂಕಿರ್ಣದಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ ಮತ್ತು ನ್ಯಾಯವಾದಿಗಳ ಸಂಘದವತಿಯಿಂದ ನಡೆದ ಕೊವಿಡ್-19 ಜನಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಸಾಲಾಂ ಭಾರತ ಟ್ರಸ್ಟನವರು ನೀಡಿರುವ ಮಾಸ್ಕ್‍ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಿ ಅವರು ಮಾತನಾಡಿದರು.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವದು, ಸ್ಯಾನೀಟೈಜರ ಬಳಕೆ ಮತ್ತು ಬಿಸಿ ನೀರಿನ್ನು ಹೆಚ್ಚಿಗೆ ಬಳಕೆ ಮಾಡುವದನ್ನು ಸಾರ್ವಜನಿಕರು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೋಳ್ಳಬೇಕು. ಮೂಡನಂಬಿಕೆಯನ್ನು ನಂಬದೆ ಆರೋಗ್ಯ ಇಲಾಖೆ ಸೂಚಿಸಿರುವ ನಿಯಮಗಳನ್ನೆ ಸಾರ್ವಜನಿಕರು ಪಾಲಿಸಬೇಕು ಎಂದು ಅವರು ಹೇಳಿದರು.
ಹಿರಿಯ ಶ್ರೇಣಿ ನ್ಯಾಯಧಿಶೆ ಕೆ.ಬಿ.ಚಿಂತಾ ಮತ್ತು ಕಿರಿಯ ಶ್ರೇಣಿ ನ್ಯಾಯಾಧಿಶ ಸುರೇಶ ಸವದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಮಯದಲ್ಲಿ ತಾಲೂಕಾ ವೈಧ್ಯಾಧಿಕಾರಿ ಸತೀಶ ತಿವಾರಿ, ತಹಶೀಲ್ದಾರ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗ್ಮೋರೆ, ತಾಪಂ ಇಓ ಶಶಿಕಾಂತ ಶಿವಪುರೆ, ನ್ಯಾಯವಾದಿಗಳಾದ ಬಿ.ಬಿ.ಜಾಧವ, ಯಾಸೀನ ಬಿದರಕುಂದಿ, ಕೆ.ಬಿ.ದೊಡ್ಡಮನಿ, ಎನ್.ಎಸ್.ಪಾಟೀಲ, ಎನ್.ಬಿ.ಮುದ್ನಾಳ, ಎಚ್.ಎಸ್.ಬಡಿಗೇರ, ಆರ್.ಬಿ.ಪಾಟೀಲ, ಅರವಿಂದ ಕುಂಬಾರ, ನೀಲಮ್ಮ ಬೋರಾವತ್, ಪಿಡಿಓ ಖುಬಾಸಿಂಗ್ ಜಾಧವ, ಶೋಬಾ ಮುದಗಲ್, ಅಯ್ಯಪ್ಪ ಮಲಗಲದಿನ್ನಿ, ಸಲಾಂ ಭಾರತ ಟ್ರಸ್ಟ ಮುಖ್ಯಸ್ಥ ವಾಜೀದ ಹಡಲಗೇರಿ ಮತ್ತಿತರರು ಇದ್ದರು.
ಪಟ್ಟಣದ ನ್ಯಾಯಾಲಯದ ಸಂಕಿರ್ಣದಿಂದ ಕಿತ್ತೂರ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಮುಖ್ಯ ಬಜಾರ ರಸ್ತೆ, ದ್ಯಾಮವ್ವನ ಗುಡಿ ಸೇರಿದಂತೆ ಪಟ್ಟಣದ ವಿವಿಧ ಪ್ರಮುಖ ಸ್ಥಳಗಳಲ್ಲಿ ಕೊವಿಡ್-19 ಜಾಗೃತಿ ಅರಿವು ಕಾರ್ಯಕ್ರಮದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು.