ಕೊರೊನಾ ನಿಯಂತ್ರಣಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ- ಪ್ರಧಾನಿ ಮೋದಿ ಘೋಷಣೆಗೆ ಅಷ್ಠಗಿ ಸ್ವಾಗತ

ಕಲಬುರಗಿ :ಜೂ.07: ದೇಶದ ಎಲ್ಲ ರಾಜ್ಯಗಳ 18 ವರ್ಷದ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಹಾಗೂ ದೇಶದ 80 ಕೋಟಿ ಜನರಿಗೆ ನವೆಂಬರ್ ವರೆಗೆ ಉಚಿತ ರೇಷನ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಈ ಒಂದೇ ವರ್ಷದಲ್ಲಿ ಎರಡು ಲಸಿಕೆಗಳನ್ನು ಕಂಡು ಹಿಡಿದಿರುವುದು,ದೇಶದ ವಿಜ್ಞಾನಿಗಳ ಬದ್ಧತೆಯಯನ್ನು ತೋರಿಸುತ್ತದೆ.ಈ ಸ್ವದೇಶಿ ಹಾಗೂ ಇತರೆ ಲಸಿಕೆಗಳಿಂದ ದೇಶದಲ್ಲಿ 23 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲು ಅನುಕೂಲವಾಗಿದ್ದು; ಇದೀಗ ಕೋವಿಡ್ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ ಎಂದು ಪ್ರಧಾನಿಯವರು ವಿಶ್ವಾಸ ವ್ಯಕ್ತಪಡಿಸಿರುವುದು ದೇಶದ ನಾಗರಿಕರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಅಂಬಾರಾಯ ಅಷ್ಠಗಿ ಸಂತಸ ವ್ಯಕ್ತಪಡಿಸಿದ್ದಾರೆ.