ಕೊರೊನಾ ನಡುವೆಯೂ ಕಡಿಮೆಯಾಗದ ದೀಪಾವಳಿ ಹಬ್ಬದ ಸಂಭ್ರಮ

ವಿಜಯಪುರ.ನ೧೪:ಕೊರೊನಾದಿಂದ ಸಾಕಷ್ಟು ಆರ್ಥಿಕ ವ್ಯತ್ಯಯಗಳ ನಡುವೆಯೂ ಜನತೆಗೆ ದೀಪಾವಳಿ ಹಬ್ಬದ ಸಂಭ್ರಮಕ್ಕೇನೂ ಕಡಿಮೆಯಾಗಿರಲಿಲ್ಲ. ದೀಪಾವಳಿ ಹಬ್ಬ ನಾಳೆ ಇರುವುದರಿಂದ ಪಟ್ಟಣದ ಬಟ್ಟೆ ಅಂಗಡಿಗಳು, ಗೃಹೋಪಯೋಗಿ ಅಂಗಡಿ, ಎಲೆಕ್ಟ್ರಾನಿಕ್ಸ್ ಮಳಿಗೆ, ದಿನಸಿ ಅಂಗಡಿ ಹಾಗೂ ಸಾಂಪ್ರದಾಯಿಕ ದೀಪಗಳ ಅಂಗಡಿಗಳಲ್ಲಿ ಜನರ ಸಂಖ್ಯೆ ಅಂಗಡಿಗಳಲ್ಲಿ ಹೆಚ್ಚ ಹೆಚ್ಚು ಖಾರೀದಿಯಲ್ಲಿ ತೊಡಗಿದ್ದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧ ಉಡುಪುಗಳ ಮಳಿಗೆಗಳು ಪಟ್ಟಣದಲ್ಲಿ ಸಾಕಷ್ಟು ಇದ್ದು ಬಟ್ಟೆ ಅಂಗಡಿಗಳು ಈಗಾಗಲೇ ಭಾರಿ ಪ್ರಮಾಣದ ರಿಯಾಯಿತಿಯನ್ನು ನೀಡತೊಡಗಿವೆ. ಜೊತೆಗೆ ‘ಲಕ್ಕಿ ಡ್ರಾ ಕೂಪನ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಗೃಹಬಳಕೆ ಎಲೆಕ್ಟ್ರಾನಿಕ್ ಮಳಿಗೆಗಳು ವಿಶೇಷ ರಿಯಾಯಿತಿ, ಕೆಲವು ಟಿವಿ, ಉಪಕರಣಗಳಿಗೆ ನೀಡಲಾಗುತ್ತಿದೆ.
ಬೆಲೆ ಏರಿಕೆ ಬಿಸಿ: ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಒಡವೆ ಹಾಗೂ ಬಟ್ಟೆಗಳ ಬೆಲೆ ಶೇ. ೨೫ರಷ್ಟು ಹೆಚ್ಚಿರುವುದರಿಂದ ತಮ್ಮ ಮೆಚ್ಚಿನ ಉಡುಪುಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟತೊಡಗಿದೆ.
ಈ ವರ್ಷ ಬಟ್ಟೆಯ ಬೆಲೆಯಲ್ಲಿ ಶೇ. ೨೫ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಹೀಗಾಗಿ ಮೊದಲು ಮಕ್ಕಳಿಗೆ ಅಗತ್ಯ ಉಡುಪುಗಳನ್ನು ಖರೀದಿಸಲು ನಾವು ನಿರ್ಧರಿಸಿದ್ದೇವೆ. ಹಬ್ಬಕ್ಕೆ ದಿನಸಿ ಪದಾರ್ಥಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ತರಕಾರಿ ಬೆಲೆಗಳು ಮಾತ್ರ ಗಗನಕ್ಕೆ ಏರಿವೆ ಬಜೆಟ್‌ನಲ್ಲಿ ಹಣ ಉಳಿದರೆ, ಅದಕ್ಕೆ ತಕ್ಕಂತೆ ನಾವು ಖರೀದಿಸುತ್ತೇವೆ ಎನ್ನುತ್ತಾರೆ ಗೃಹಿಣಿ ಲಕ್ಷ್ಮಮ್ಮ
ಬೆಲೆ ಏರಿಕೆಯ ಬಿಸಿಯಿಂದಾಗಿ ಈ ಬಾರಿ ಹೆಚ್ಚಿನ ವಹಿವಾಟು ಆಗುವ ನಿರೀಕ್ಷೆ ಇಲ್ಲವಾಗಿದೆ. ಕೆಲ ಕಂಪೆನಿಗಳು ಕೆಲವೊಂದು ಮಾತ್ರ ವಿಶೇಷ ರಿಯಾಯಿತಿ ನೀಡುತ್ತಿವೆ. ಆದರೆ, ಗ್ರಾಹಕರು ಎಲ್ಲ ಉತ್ಪನ್ನಗಳಿಗೂ ರಿಯಾಯಿತಿ ಬಯಸುತ್ತಾರೆ. ಹೀಗಾಗಿ ಬೆಲೆ ವಿಚಾರಿಸುವವರೇ ಹೆಚ್ಚಾಗಿದ್ದಾರೆ ಎನ್ನುತ್ತಾರೆ ಪಟ್ಟಣದ ಆರ್.ಎಂ.ಸಿ.ಟಿ ಎಲೆಕ್ಟ್ರಾನಿಕ್ಸ್ ಮಳಿಗೆ ಮಾಲೀಕರಾದ ರಾಜು, ಮಂಜುನಾಥ್
ಮಣ್ಣಿನ ಹಣತೆ ದೀಪ: ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬ ಆಚರಿಸುವ ಕುರಿತು ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಿವಿಧ ಬಗ್ಗೆಯ ಮಣ್ಣಿನ ಹಣತೆಗಳು ಮಾರುಕಟ್ಟೆಗೆ ಬಂದರು ವ್ಯಾಪಾರ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವು ತುಂಬ ಕಡಿಮೆ. ಮಣ್ಣಿನ ೫ ಹಣತೆಗಳಿಗೆ ೧೦ ರೂಪಾಯಿ ಇತ್ತು. ಈ ವರ್ಷ ವಿವಿಧ ಬಗ್ಗೆ ಒಂದು ಜೊತೆ ಹಣತೆ ೧೦ ರೂ ಇಂದ ೨೫ ರೂಗಳಿಗೆ ಮಾರಟ ವಾಗುತ್ತಿವೆ. ಈ ಬಾರಿ ಮಣ್ಣಿನ ಹಣತೆ ಖರೀದಿಸಲು ಹೆಚ್ಚೆಚ್ಚು ಜನರು ಆಗಮಿಸುತ್ತಿದ್ದು, ಉತ್ತಮ ವ್ಯಾಪಾರ ಆಗಬಹುದು ಎಂದು ಹಣತೆ ವ್ಯಾಪಾರಿ ಬಾಬಾಜಾನ್ ತಿಳಿಸಿದರು.
ಹೂವುಗಳ ಬೆಲೆ ಗಗನಕ್ಕೆ; ಪ್ರತಿ ಹಬ್ಬಕ್ಕೂ ಮಾತ್ರ ಹೂವು ಹಣ್ಣುಗಳ ಬೆಲೆ ಮಾತ್ರ ಕಡಿಮೆ ಆಗಿಲ್ಲ ಕನಕಾಂಬರ ೧೫೦೦. ೨೦೦೦ ರೂ, ಸೇವಂತಿ ಕೆ.ಜಿ. ೨೦೦. ಸಣ್ಣ ಗುಲಾಬಿ ೨೦೦, ಮಲ್ಲಿಗೆ ೫೦೦, ಚಂಡು ೬೦, ತುಳಸಿ ೬೦ ರೂ ಮಾರಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ರಾಮಣ್ಣ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಬಲಿಜ ಬೀದಿ ಹಾಗೂ ಹಲವು ಪ್ರಮುಖ ಮಳಿಗೆಗಳು, ಸಂಜೆಯಾಯಿತೆಂದರೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿಕೊಂಡು ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ.