ಕೊರೊನಾ – ದಾಖಲೆ ನಿರ್ಮಿಸಿದ ಅಮೆರಿಕಾ

ವಾಷಿಂಗ್ಟನ್, ನ.೧೪- ಜಗತ್ತಿನಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ದಾಖಲೆ ನಿರ್ಮಿಸಿದೆ.
ಇತ್ತೀಚೆಗೆ ಅಮೇರಿಕಾ ಮತ್ತು ಯುರೋಪ್ ಖಂಡದಲ್ಲಿ ಪ್ರತಿದಿನ ಸರಿ ಸುಮಾರು ೧.೬೨ ಲಕ್ಷ ಮಂದಿಗೆ ಸೋಂಕು ಪ್ರಕರಣ ದಾಖಲಾಗುತ್ತಿವೆ.ಇದು ಈ ದೇಶಗಳ ಆಡಳಿತವನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
ಇದುವರೆಗೂ ವಿಶ್ವದಲ್ಲಿ ೫ ಕೋಟಿ ೩೭ ಲಕ್ಷದ ೪೬ ಸಾವಿರದ ೯೪೪ ಮಂದಿ ಸೋಂಕಿಗೆ ಭಾದಿತರಾಗಿದ್ದು ಇದುವೆರಗೆ ಸೋಂಕಿನಿಂದ ೧೩ ಲಕ್ಷದ ೯ ಸಾವಿರದ ೪೦೮ ಮಂದಿ ಮೃತಪಟ್ಟಿದ್ದಾರೆ.
ಸೋಂಕಿನಿಂದ ೩ಕೋಟಿ ೭೫ ಲಕ್ಷದ ೨೩ ಸಾವಿರದ ೯೭೩ ಮಂದಿ ಚೇತರಿಸಿಕೊಂಡಿದ್ದಾರೆ ಸದ್ಯ ವಿಶ್ವದಲ್ಲಿ ೧ ಕೋಟಿ ೪೯ ಲಕ್ಷದ ೧೩ ಸಾವಿರದ ೫೬೩ ಸಕ್ರಿಯ ಪ್ರಕರಣಗಳಿವೆ
ಅಮೆರಿಕದಲ್ಲಿ ಅತಿ ಹೆಚ್ಚಿನ ಸಾವು ಮತ್ತು ಸೋಂಕಿನ ಪ್ರಕರಣಗಳು ದಾಖಲಾಗಿವೆ ಜೊತೆಗೆ ಯುರೋಪ್ ಖಂಡದಲ್ಲಿ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ. ಕಳೆದ ಏಳು ದಿನಗಳಲ್ಲಿ ಸರಾಸರಿ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು ಕಳೆದ ತಿಂಗಳಿಗಿಂತ ,ದ್ವಿಗುಣಗೊಂಡಿದೆ.
ಅಮೆರಿಕ ಮತ್ತು ಯುರೋಪ್ ಕಂಡಗಳಲ್ಲಿ ಪ್ರತಿದಿನ ಸರಾಸರಿ ಹತ್ತು ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋಂಕು ಹೆಚ್ಚಾಗಿದ್ದ ಮಾರ್ಚ್ ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ ಇತ್ತೀಚಿಗೆ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಹೀಗಾಗಿ ಅಮೆರಿಕ ಮತ್ತು ಯುರೋಪಿನ ಹಲವು ದೇಶಗಳಲ್ಲಿ ಭಯದ ನಿರ್ಮಾಣವಾಗಿದೆ.
ಕಳೆದ ವರ್ಷ ನವಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸೋಂಕು ಜಗತ್ತಿನ ಎಲ್ಲ ದೇಶಗಳಿಗೆ ವ್ಯಾಪಿಸಿ ವಿವಿಧ ದೇಶಗಳ ಆರ್ಥಿಕತೆ ಗಣನೀಯವಾಗಿ ಕುಸಿಯುವಂತೆ ಮಾಡಿದೆ ಅದರಲ್ಲೂ ಭಾರತ ಅಮೆರಿಕ ಇಂಗ್ಲೆಂಡ್ ಇಟಲಿ ಸೇರಿದಂತೆ ಹಲವು ದೇಶಗಳು ತತ್ತರಿಸಿಹೋಗಿದೆ.
ಇತ್ತೀಚಿಗೆ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಸೋಂಕಿನ ಪ್ರಮಾಣ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿದೆ ಅಲ್ಲದೆ ಪ್ರತಿದಿನ ಹತ್ತು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.ಭಾರತದಲ್ಲಿ ಸಾವಿನ ಪ್ರಮಾಣ ಐನೂರರ ಆಜುಬಾಜಿನಲ್ಲಿ ಬಂದಿದೆ