
ವಿಜಯಪುರ, ಮಾ ೧೦- ಶ್ರೀ ಸೌಮ್ಯಕೇಶವಸ್ವಾಮಿ ದೇವರ ದಯದಿಂದ ರಾಜ್ಯದಲ್ಲಿನ ಕೊರೊನಾ ಸೋಂಕು ತೊಲಗಿದ್ದು, ಎಲ್ಲರ ಬಾಳಲ್ಲಿ ಮತ್ತೆ ವಸಂತ ಮೂಡುವಂತಾಗಲೆಂದು, ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ತಿಳಿಸಿದರು.
ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಗಾಂಧಿಚೌಕದ ರಥದ ಬಳಿ ಹಮ್ಮಿಕೊಳ್ಳಲಾಗಿದ್ದ ಅಂಕತಟ್ಟಿ ದಿ. ಶ್ರೀ ಚಿಕ್ಕರುದ್ರಪ್ಪ ನವರ ಸ್ಮರಣೆಯಲ್ಲಿ ಶ್ರೀ ಸಂಗಮೇಶ್ವರ ಧರ್ಮಸಂಸ್ಥೆ ವತಿಯಿಂದ ಏರ್ಪಡಿಸಿದ್ದ ವಸಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿರವರಿಗೆ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು.
ಶ್ರೀ ಸಂಗಮೇಶ್ವರ ಧರ್ಮಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಕಾಂತ್‌ಕುಮಾರ್, ರಥೋತ್ಸವ ಸಮಿತಿಯ ಪಿ.ನಾಗರಾಜಪ್ಪ, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್, ಧರ್ಮದರ್ಶಿಗಳಾದ ಸುರೇಶ್‌ಬಾಬು, ಮುರಳೀಧರ್,ಸಿ. ಬಾಸ್ಕರ್, ಪಿ. ಮುರಳಿಧರ್, ಕೆ. ಮುರಳಿಧರ್ ಮಗು ಹಾಗೂ ವಿ. ಶಿವಕುಮಾರ್, ಸಿ. ವಿಜಯರಾಜ್, ಪಿ. ಬಸವರಾಜ್, ಕಿರಣ್ ಕುಮಾರ್, ಚನ್ನಪ್ಪ ಉಪಸ್ಥಿತರಿದ್ದರು. ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೇವಾಲಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ, ಮಹಾಮಂಗಳಾರತಿ, ನಂತರ ಶ್ರೀದೇವಿ ಭೂನಿಳಾ ಸಮೇತ ಶ್ರೀ ಸ್ವಾಮಿರವರನ್ನು ದೇವಾಲಯದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಹೊತ್ತುತ್ಸವದೊಂದಿಗೆ ಹೊತ್ತು ತಂದು, ಗಾಂಧಿಚೌಕದಲ್ಲಿನ ರಥದ ಬಳಿ ವಸಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಚಕರಾದ ಮುರಳೀಧರ್ ಭಟ್ಟಾಚಾರ್ಯರವರು ಸಾರ್ವಜನಿಕರ ಮೇಲೆ ಬಣ್ಣದ ನೀರನ್ನು ಸಿಂಪಡಿಸಿದರು.