ಕೊರೊನಾ ತೊಲಗಲಿ ಎಂದು ದೇವಿಗೆ ಪ್ರಾರ್ಥನೆ

ಮುದ್ದೇಬಿಹಾಳ:ಮೇ.29: ಸಧ್ಯ ಕೋವಿಡ್ 19 ಬಂದು ಇಡೀ ಮಾನವ ಕುಲವೇ ದೀಗ್ಭಮೆಗೊಂಡು ಸಾವು ನೋವುಗಳಿಂದ ಜನರು ನೆಮ್ಮದಿಯನ್ನೇ ಕಳೇದುಕೊಂಡು ತೀವೃ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೋರೊನಾ ಎನ್ನುವ ಮಹಾಮಾರಿ ಬೇಗ ತೊಲಗಿ ಎಲ್ಲ ಜನರು ಮೊದಲಿನಂತೆ ಜೀವನ ನಡೆಸುವಂತಾಗಬೇಕು ಸಧ್ಯ ಪಿಲೇಕಮ್ಮ ದೇವಿಯು ಕೋರೊನಾದಿಂದ ಮುಕ್ತಿ ನೀಡುವ ಮೂಲಕ ಎಲ್ಲರ ಬದುಕು ಹಸನಾಗಲಿ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಪ್ರಾರ್ಥಿಸಿದರು.

ಪಟ್ಟಣದ ಇಲ್ಲಿನ ತಂಗಡಗಿ ರಸ್ತೆ ಮಾರ್ಗದಲ್ಲಿರುವ ಪಿಲೇಕೆಮ್ಮ ದೇವಿಗೆ ಶುಕ್ರವಾರ ಬೇಳಿಗ್ಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರುನೀ ಹಿಂದೆ ಶತಮಾನಗಳ ಹಿಂದೆ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ಲೇಗ್ ಎನ್ನುವ ಮಹಾಮಾರಿ ರೋಗ ಬಂದು ಇಲ್ಲಿನ ಎಲ್ಲ ವಾಸಿಗರೂ ಗಂಟು ಮೂಟೆ ಕಟ್ಟಿಕೊಂಡು ಮಕ್ಕಳು ಸೇರಿದಂತೆ ಇಡಿ ಸಂಸಾರ ಕುಟುಂಭ ಸಮೇತ ಊರು ಬಿಟ್ಟು ಹೋಗುವ ಸ್ಥಿತಿ ನಿರ್ಮಾಣಗೊಂಡಿತ್ತು.

ಆಗ ಅಂದಿನ ಕೆಲ ದಾರ್ಶನಿಕರು, ಊರ ಹೊರಗಿನ ವಿಶಾಲ ರಸ್ತೆ ಪಕ್ಕದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಯಜ್ಞ ಹೋಮಗಳನ್ನು ನಡೆಸಿದ್ದರÀ ಪರಿಣಾಮ ಅಂದು ಜನರ ಬಲಿ ಪಡೆದುಕೊಳ್ಳುವ ಮಹಾಮಾರಿ ಪ್ಲೇಗ್ ರೋಗವೂ ಸಂಪೂರ್ಣ ತೊಲಗಿ ಸಾಮಾನ್ಯ ಜೀವನ ಪ್ರಾರಂಭಗೊಂಡು ಊರು ಬಿಟ್ಟು ಹೋದ ಜನರು ಮರಳಿ ಊರಿನೊಳಗೆ ಬಂದು ವಾಸ ಮಾಡಲು ಪ್ರಾರಂಭಸಿದರು ಎನ್ನುವುದು ಪ್ರತೀತಿ ಹಾಗಾಯೇ ಅಂದಿನ ಪ್ಲೇಗಮ್ಮ ದೇವಿ ಇಂದು ಪ್ರಸ್ತುತ ಪಿಲೇಕೇಮ್ಮ ಎಂದು ಕರೆಯಲಾಗುತ್ತಿದೆ ಎಂದು ಇತಿಹಾಸ ವಿದೇ.

ಸಧ್ಯ ಅದರಂತೆ ನಾವೂ ಕೂಡ ನಮ್ಮ ಜನರಿಗೆ ಯಾವ ಆರೋಗ್ಯದಿಂದ ಯಾರೀಗೂ ತೊಂದರೆಯಾಗಬಾರದು ಎಲ್ಲರೂ ಕೂಡ ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಪಿಲೇಕೆಮ್ಮ ದೇವಿಯಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ನಡೆಸಲಾಗಿದೆ. ಆದರೂ ಸಹಿತ ಕೋರೊನಾ ಬಗ್ಗೆ ಯಾರೂ ಕೂಡ ನಿರ್ಲಕ್ಷ ವಹಿಸದೇ ಆಗಾಗ ಕೈತೊಳೆದುಕೊಳ್ಳುವುದು, ಮಾಸ್ಕ್ ಧರಿಸಿ ಸ್ಯಾನಿಟೈಜರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಕೋರೊನಾ ಹರಡದಂತೆ ಹತ್ತಿಕ್ಕುವಲ್ಲಿ ಪ್ರಯತ್ನಿಸಬೇಕು ಎಂದರು.

ಈ ವೇಳೇ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ), ತಾಲೂಕಾ ಬಿಜೆಪಿ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ದೇವೇಂದ್ರ ವಾಲಿಕಾರ, ಯುವ ಮುಖಂಡ ವಿಕ್ರಮ ಓಸ್ವಾಲ್, ದೊರೆ ಹಾಲಣ್ಣವರ, ಗಣ್ಯರಾದ ಮುರಳಿ ಬುಡ್ಡೋಡಗಿ, ಅರವಿಂದ ಕಾಶಿನಕುಂಟಿ, ಪ್ರಕಾಶ ಹೂಗಾರ, ಮುಂಜುನಾಥ ರತ್ನಾಕರ, ಮಹಾಂತೇಶ ಹಡಪದ, ರಾಘು ಪತ್ತಾರ, ವಿಜಯ ಬಡಿಗೇರ, ಅಕ್ಷಯ ಕೊಟ್ಟೂರ, ಶಿವು ದಡ್ಡಿ ಸೇರಿದಂತೆ ಹಲವರು ಇದ್ದರು.