ಕೊರೊನಾ ತಪಾಸಣೆ ಲಸಿಕೆಗಾಗಿ ಸರತಿ ಸಾಲು

ನೆಲಮಂಗಲ.ಏ೨೪: ಕೋವಿಡ್ ೧೯ ಎರಡನೇ ಅಲೆಯ ಪ್ರಭಾವದಿಂದ ಗಾಬರಿಗೊಂಡ ಸಾರ್ವಜನಿಕರು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನ ತಪಾಸಣೆ ಮಾಡಿಸಲು ಮತ್ತು ಕೋವಿಡ್ ಲಸಿಕೆ ಪಡೆಯಲು ಮುಂಜಾನೆ ೮ ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದು ೧೧ ಗಂಟೆಯಾದರೂ ಸರ್ಕಾರಿ ವೈದ್ಯಾಧಿಕಾರಿಗಳಾಗಲಿ ಸಿಬ್ಬಂದಿಗಳು ಬಂದಿರುವುದಿಲ್ಲ, ಸರ್ಕಾರ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ವೈದ್ಯಾಧಿಕಾರಿಗಳನ್ನು ಕರೆಮಾಡಿ ಕೇಳಿದರೆ ಲಸಿಕೆ ಬಂದಿರುವುದಿಲ್ಲ, ಲಸಿಕೆ ಬಂದ ತಕ್ಷಣವೇ ನೀಡುತ್ತೇವೆ ನಾಳೆಯಿಂದ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ನರಸಿಂಹಯ್ಯ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ತುರ್ತಾಗಿ ನೀಡುವಂತೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿ.ಎಚ್.ಓ ಮಂಜುಳಾದೇವಿ ತಿಳಿಸಿದರು
ಕೋವಿಡ್ ಲಸಿಕೆ, ಕೊರೋನಾ ತಪಾಸಣೆ, ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡುತ್ತೇವೆ. ನಮ್ಮಲ್ಲಿ ಕಡಿಮೆ ಬೆಡ್ ಇದ್ದಾಗ ಖಾಸಗಿ ಆಸ್ಪತ್ರೆಯಲ್ಲಿ ಶೇಕಡ ೫೦% ಕೊರೋನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲು ನಿರ್ದೇಶನ ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಹರೀಶ್ ತಿಳಿಸಿದರು
ನಮ್ಮ ಸಿಬ್ಬಂಧಿಗಳು ಯಾವುದೇ ರೀತಿಯ ಚಿಕಿತ್ಸೆಗೆ ಹಣ ಕೇಳಿದರೆ ಕೂಡಲೇ ಸಾರ್ವಜನಿಕರು ನನಗೆ ತಿಳಿಸಿದರೆ ತಕ್ಷಣವೇ ತಪ್ಪಿತಸ್ಥ ಸಿಬ್ಬಂಧಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಡಾ.ಹರೀಶ್ ತಿಳಿಸಿದರು.