ಕೊರೊನಾ ತಡೆಗೆ ಸ್ವಚ್ಛತೆಗೆ ಆದ್ಯತೆ

ಕೋಲಾರ,ಏ.೨೭: ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿಯ ೨ನೇ ಅಲೆ ದಿನೇ ದಿನೇ ಹೆಚ್ಚಾಗಿ ಅರಡುತ್ತಿರುವ ಕಾರಣ ಗ್ರಾಮದಲ್ಲಿ ಕೊರೊನಾ ವೈಸರ್ ತಡೆಗಟ್ಟುವ ಕಾರಣ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮೊದಲ ಅದ್ಯತೆ ನೀಡಬೇಕು ಎಂದು ಗ್ರಾಪಂ ಸದಸ್ಯರಾದ ವಿಜಯಮ್ಮ ನಾಗರಾಜ್ ತಿಳಿಸಿದ್ದರು.
ಬೇತಮಂಗಲ ಸಮೀಪ ಇರುವ ಟಿ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಟಿ ಗೊಲ್ಲಹಳ್ಳಿ ಗ್ರಾಮದಲ್ಲಿ ಇರುವ ಚರಂಡಿಗಳನ್ನು ಸ್ವಚ್ಛತೆಯನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಭಾಗದಲ್ಲಿ ಜನರನ್ನು ಸಹ ಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದ ಚರಂಡಿಗಳನ್ನು ಹಾಗೂ ಮನೆಗಳ ಸುತ್ತ ಮತ್ತು ಸ್ವಚ್ಚತೆಯ ಕಾರ್ಯವನ್ನು ಮಾಡಲಾಗುತ್ತಿದೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಿಂಪನೆಯನ್ನು ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಮ್ಮ ನಾಗರಾಜ್, ಮುಖಂಡರಾದ ಸುಬ್ರಮಣಿ ಸೇರಿದಂತೆ ಯುವಕರು ಇದ್ದರು.