ಕೊರೊನಾ ತಡೆಗೆ ಲಸಿಕೆ ಸಾಕಾಗದು: ಡಬ್ಲ್ಯುಎಚ್‌ಒ

ಜಿನಿವಾ. ನವೆಂಬರ್ ೧೭. ಮಹಾಮಾರಿ ಕೋರೋನ ವೈರಸ್ ಹರಡುವಿಕೆ ತಡೆಯಲು ಲಸಿಕೆಯಿಂದ ಮಾತ್ರ ಸಾಧ್ಯವಿಲ್ಲ. ಹೆಚ್ಚಿನ ಕಣ್ಗಾವಲು ಇಡುವುದು ಅತ್ಯಗತ್ಯ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.
ಅಮೆರಿಕದ ಔಷಧ ತಯಾರಿಕಾ ಕ್ಷೇತ್ರದ ದೈತ್ಯ ಕಂಪನಿ ಠಿಜಿizeಡಿ ತಾನು ಅಭಿವೃದ್ಧಿಪಡಿಸಿರುವ ಕೋವಿಡ್ ೧೯ ಲಸಿಕೆ ಮಾರಣಾಂತಿಕ ರೋಗ ವೈರಾಣು ತಡೆಯಲು ಶೇಕಡ ೯೪. ಐದರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಘಟನೆಯ ಈ ಹೇಳಿಕೆ ಹೊರಬಿದ್ದಿದೆ.
ಸಂಘಟನೆಯ ಮಹಾ ನಿರ್ದೇಶಕ ಡಾಕ್ಟರ್ ಟೆಡ್ರೋಸ್ ಅಧೋನೊಮ್ ಗೆ ಬ್ರಿಯೋ ಸಿಸ್ ಅವರು, ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ದಿನದಿಂದ ಇಲ್ಲಿವರೆಗೆ ಈ ರೋಗವನ್ನು ನಿಯಂತ್ರಿಸಲು ಲಸಿಕೆ ಒಂದನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೆ ರೋಗ ನಿಯಂತ್ರಿಸಲು ಲಸಿಕೆ ಒಂದು ಪೂರಕವಾಗಿ ಕೆಲಸ ಮಾಡಬಹುದೇ ವಿನಹ ಅದೇ ಪರ್ಯಾಯ ಮಾರ್ಗವಲ್ಲ ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಹಲವಾರು ಕಂಪನಿಗಳು ಕರೋನ ವೈರಾಣು ನಿಯಂತ್ರಿಸಲು ಹಲವಾರು ಲಸಿಕೆಗಳ ಅಭಿವೃದ್ಧಿ ಪಡಿಸಿದ್ದು ಪ್ರಸ್ತುತ ಮೂರನೇ ಹಂತದ ಮಾನವ ಪ್ರಯೋಗ ಪ್ರಕ್ರಿಯೆಯಲ್ಲಿ ತೊಡಗಿವೆ. ರಷ್ಯಾದ ಸ್ಪುಟ್ನಿಕ್,-ವಿ , ಭಾರತ್ ಬಯೋಟೆಕ್ ಕಂಪನಿಯ ಕೋ ವ್ಯಾಕ್ಸಿನ್ ಮತ್ತು ಅಮೆರಿಕದ ಠಿಜಿizeಡಿ ಕಂಪನಿಯ ಬಿಎನ್ ಟಿ ೧೬೨ ಎಂ ಆರ್ ಎನ್ ಚಿ ಮೂಲದ ಲಸಿಕೆಗಳು ಈ ಪಟ್ಟಿಯಲ್ಲಿ ಸೇರಿವೆಯೆದು ಅವರು ಹೇಳಿದ್ದಾರೆ.
ಲಸಿಕೆಗಳ ಅಭಿವೃದ್ಧಿ ಹಾಗೂ ವಿತರಣಾ ವ್ಯವಸ್ಥೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯ ಮುಖ್ಯಸ್ಥರ ಹೇಳಿಕೆ ಲಸಿಕೆಗಾಗಿ ಕಾತುರದಿಂದ ಎದುರು ನೋಡುತ್ತಿರುವ ಜನರಲ್ಲಿ ಆಶ್ಚರ್ಯ ಉಂಟುಮಾಡಿದೆ.
ಮಹಾಮಾರಿ ವೈರಾಣು ವನ್ನು ನಿಯಂತ್ರಿಸಲು ಲಸಿಕೆಯಿಂದ ಮಾತ್ರ ಸಾಧ್ಯವಿಲ್ಲ. ಇದರ ಜೊತೆಗೆ ಜಾಗೃತಿ, ಪರೀಕ್ಷೆ, ಪ್ರತ್ಯೇಕವಾಸ ಮತ್ತು ಸೋಂಕು ಜಾಡು ಹಿಡಿಯುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ಅವರು ಹೇಳಿದ್ದಾರೆ.
ಒಂದು ವೇಳೆ ಸಿಕ್ಕಿ ದೊರೆತರೂ ಆರೋಗ್ಯ ಕಾರ್ಯಕರ್ತರು ವಯೋವೃದ್ಧರು ಮತ್ತು ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ನೀಡಬೇಕಾಗುತ್ತದೆ. ಇದರಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.