ಕೊರೊನಾ ತಡೆಗೆ ಜಿಲ್ಲಾ ಕಿರಾಣಿ ವರ್ತಕರಿಂದ 3000 ಮುಖಪರದೆ ವಿತರಣೆ: ಪೌರಾಯುಕ್ತ ಚಾಲನೆ

ಯಾದಗಿರಿ:ಎ.24: ಜಿಲ್ಲಾ ಕಿರಾಣಾ ಮತ್ತು ಜನರಲ್ ಸ್ಟೋರ್ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘಧ ವತಿಯಿಂದ ಕೊಡಮಾಡಿದ ಕೊವಿಡ್-19 ಕೊರೋನಾ ವ್ಯೆರಸ್ ಹಾವಲಿ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 3000 ಮೂರು ಸಾವಿರ ಮಾಸ್ಕಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ನಗರದ ಹಳೆ ಬಸ್ ನಿಲ್ದಾಣ, ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಭೀಮಣ್ಣ ಟಿ.ನಾಯಕ ಚಾಲನೆ ನೀಡಿ ಮಾತನಾಡಿ ರೂಪಾಂತರಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ತಡೆಯಲು ಮುಖಪರದೆ ಧರಿಸುವುದು ಕಡ್ಡಾಯ ಮಾಡಿದಲ್ಲಿ ತಕ್ಕಮಟ್ಟಿಗೆ ಅದು ಹಬ್ಬುವುದು ತಡೆಯಲು ಸಾಧ್ಯವಾಗುತ್ತದೆ ಆದ್ದರಿಂದ ಎಲ್ಲರೂ ಮುಖಪರದೆ ಧರಿಸಿ ವೈರಾಣು ಹಬ್ಬುವುದು ತಡೆಯಿರಿ ಎಂದರು.
ಈ ಸಂದರ್ಭದಲ್ಲಿ ಶಶಿ ಸುಪರ್ ಬಜಾರ್’ನ ಒಡೆಯರಾದ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ ಸಂಘಟನೆಯಿಂದ ಉಚಿತವಾಗಿ ಮುಖಪರದೆ ವಿತರಣೆ ಮಾಡುತ್ತಿರುವ ಕಾರಣವಿಷ್ಟೇ ಜನರಲ್ಲಿ ಜಾಗೃತಿ ಮೂಡಬೇಕು ಮತ್ತು ಕೊರೋನಾ ಹಬ್ಬುವುದು ತಡೆಹಿಡಿಯಬೇಕು ಎಂಬುದೇ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಕಿರಾಣಾ ಮತ್ತು ಜೆನೆರಲ್ ಸ್ಟೋರ್ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಹುಲ್ ಗಾಂದಿ, ಆರ್.ಕೆ.ಬಾಪುರೆ, ಯಶವಂತ ಜಾಧವ್, ವಿನೋದ ಕಲ್ಕೊಂದ, ಸಿದ್ದುಗೌಡ, ಗಣೇಶ ಕಿರಾಣಿ, ಮದನ ಪಟೇಲ್ ಮುಂತಾದವರು ಇದ್ದರು.