ಕೊರೊನಾ ತಡೆಗೆಮುನ್ನೆಚ್ಚರಿಕೆಯೊಂದೇ ಮಾರ್ಗ

ಹೊನ್ನಾಳಿ.ಸೆ.೮: ಕೊರೊನಾ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಯೊಂದೇ ಮಾರ್ಗ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ನಗರದ ಟಿ.ಬಿ. ವೃತ್ತದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಹಮ್ಮಿಕೊಂಡಿದ್ದ  ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕೊರೊನಾ ವೈರಸ್ ಸೋಂಕು ಹರಡದಿರುವಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಲು ಮುಂದಾಗಬೇಕು. ವೈಯಕ್ತಿಕ ಸ್ವಚ್ಛತೆ, ಮಾಸ್ಕ್ಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತಿತರ ಮುಂಜಾಗೃತಾ ಕ್ರಮಗಳನ್ನು ಎಲ್ಲರೂ ಕೈಗೊಳ್ಳಬೇಕು ಎಂದು ತಿಳಿಸಿದರು.ಕಳೆದ ಸುಮಾರು ಎರಡು ಶೈಕ್ಷಣಿಕ ವರ್ಷಗಳ ಕಾಲ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ-ಪ್ರವಚನಗಳನ್ನು ನಡೆಸಲಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಏಕತಾನತೆಯನ್ನು ಅನುಭವಿಸುವಂತಾಗಿತ್ತು. ಇದೀಗ, ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದಾರೆ. ವಿದ್ಯಾರ್ಥಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ಸರಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಕಾಲೇಜಿಗೆ ಹಾಜರಾಗಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿವರಿಸಿದರು.ಅರಬಗಟ್ಟೆ ಗ್ರಾಮದಲ್ಲಿ ಸುಸಜ್ಜಿತವಾದ, ಜಾಗತಿಕ ಗುಣಮಟ್ಟದ ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಮೂಲಕ ಕೊರೊನಾ ಸೋಂಕಿತರ ನೆರವಿಗೆ ನಿಂತೆ. ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವರ ಜೊತೆಯಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೆöÊರ್ಯ ತುಂಬುವ ಕೆಲಸಕ್ಕೆ ಮುಂದಾದೆ. ಅಲ್ಲಿ ಪ್ರತಿ ದಿನ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೊರೊನಾ ಸೋಂಕಿತರಲ್ಲಿ ಜೀವನೋತ್ಸಾಹ ಮೂಡಿಸುವ ಕೆಲಸ ಮಾಡಿದೆ. ಕೆಲವರು ತಮ್ಮ ಈ ಜನಪರ ಕಾರ್ಯ ಸಹಿಸದೇ ಕೀಳುಮಟ್ಟದ ಪ್ರತಿಕ್ರಿಯೆ ನೀಡಿದರು. 
ಪ್ರಚಾರಕ್ಕೋಸ್ಕರ ರೇಣುಕಾಚಾರ್ಯ ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕೊರೊನಾದಿಂದ ಜನರು ಸಾವಿಗೀಡಾದ ಸಂದರ್ಭದಲ್ಲಿ ಹಳ್ಳಿಗಳಿಗೆ ಹೋಗದವರು ಇದೀಗ, ಗ್ರಾಮೀಣ ಭಾಗಗಳ ಜನರ ಮನೆಗಳಿಗೆ ತೆರಳಿ, ಮೃತರ ಫೋಟೋಗಳಿಗೆ ಹೂವಿನಹಾರ ಹಾಕುತ್ತಿದ್ದಾರೆ ಎಂದು ಕುಟುಕಿದರು.ಉಪನ್ಯಾಸಕರಾದ ಎಚ್. ಬಸವರಾಜ್, ಸುರೇಶ್ ಲಮಾಣಿ, ಬಿ.ಜೆ. ಸುಪ್ರಿಯಾ, ಸುಮತಿ ಗಿರಿಧರ್, ಸಲ್ಮಾ ಬಾನು, ಲಕ್ಷಿö್ಮÃ, ಎಂ.ವಿ. ವೀರಯ್ಯ, ಕೆ. ನಾಗರಾಜ್, ಆನಂದ್, ಕೆ.ಇ. ನೇತ್ರಾವತಿ, ಬಿ. ಶಾಲಿನಿ, ಬಸವರಾಜ್, ಸಿಬ್ಬಂದಿ ನಾಗರಾಜ್, ಲಕ್ಷಿö್ಮÃ ಇತರರು ಇದ್ದರು.