ಕೊರೊನಾ ತಡೆಗಟ್ಟಲು ಕೊವಿಡ್ ನಿಯಮ ಪಾಲಿಸಿ

ಆಳಂದ:ಎ.24:ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಇದರ ನಿಯಂತ್ರಣ ಮಾಡಲು ಸ ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವುದು ನಮ್ಮ ನಿಮ್ಮಲ್ಲರ ಕರ್ತವ್ಯವಾಗಿದೆ ಎಂದು ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಅವರು ಹೇಳಿದರು.

ತಹಸೀಲ ಕಚೇರಿಯಲ್ಲಿ ಸಹಾಯಕ ಆಯುಕ್ತ ರಾಮಚಂದ್ರ ಗಡದೆ ನೇತೃತ್ವದಲ್ಲಿ ಸಭೆಯಲ್ಲಿ ತಿಳಿಸಿದರು. ನಂತದ ಪಟ್ಟಣದಲ್ಲಿ ಶ್ರೀರಾಮ ಮಾರ್ಕೇ, ರಜಿವಿ ರಸ್ತೆ, ಗಣೇಶ ಚೌಕ ಸುತ್ತಾಡಿ ತೆರzಂತಹ ಅಂಗಡಿಗಳನ್ನು ಮುಚ್ಚಲು ತಿಳಿ ಹೇಳಿ ಜನರು ಮಾಸ್ಕ, ಸಾನಿಟೈಜರ್ ಬಳಸಿ ಸಾಮಾಜಿ ಅಂತರ ಕಾಪಾಡಿ ಎಂದು ಹೇಳಿದ ಅವರು ಪಟ್ಟಣದ ಹೋಟಲ್, ಬೈಕ್ ಶೋರಂ ಅಂಗಡಿಗಳಿಗೆ ತೆರಳಿ ಯಾರು ನಿಯಮ ಉಲ್ಲಂಘಿಸುತ್ತಾರೆ ಅಂಥವರಿಗೆ ತಲಾ 2000 ರೂ. ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಕೋವಿಡ್ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜೊತೆಯಲ್ಲಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಗ್ರೇಡ-2 ತಹಶೀಲ್ದಾರ ಬಸವರಾಜ, ಸಿಪಿಐ ಮಂಜುನಾಥ, ಆರ್.ಐ ಶರಣು ಹಕ್ಕಿ, ಆನಂದ ಸೇರಿದಂತೆ ಇನ್ನಿತರ ಅಧಿಕಾರಿಗಳು ಜೊತೆಯಲ್ಲಿ ಇದ್ದರು.