ಕೊರೊನಾ ಜಾಗೃತಿ ಕುರಿತು ಬೀದಿನಾಟಕ

ಬಾಗಲಕೋಟೆ,ನ.9 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ರಿ), ಬಾಗಲಕೋಟೆ ಇವರ ವತಿಯಿಂದ ರಾಂಪೂರ ವಲಯದ ರಾಂಪೂರ ಕಾರ್ಯಕ್ಷೇತ್ರದ ಹಿರೇದೇವತೆ ದೇವಸ್ಥಾನದ ಗುಡಿಯಲ್ಲಿ ಕೊರೋನಾ ಜಾಗೃತಿ ಮತ್ತು ಬಯಲು ಮೂರ್ತ ವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಮಾಡಲಾಯಿತು.
ಗ್ರಾಮೀಣ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು ಕೊರೋನಾ ಎಂಬ ಹೆಮ್ಮಾರಿಯ ಅಟ್ಟಹಾಸದಿಂದ ರಕ್ಷಿಸಿಕೊಳ್ಳುವ ತಂತ್ರಗಳನ್ನು ನಾಟ್ಯದ ಮೂಲಕ ಬಿಂಬಿಸಲಯಿತು. ಬಯಲು ಮೂತ್ರ ವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳನ್ನು ಅಭಿನಯಗಳ ಮೂಲಕ ತೋರ್ಪಡಿಸಲಾಯಿತು. ಆರೋಗ್ಯವೇ ಭಾಗ್ಯ ಎನ್ನುವ ಉಕ್ತಿಯನ್ನು ಅಳವಡಿಸಿಕೊಳ್ಳಿ ಎನ್ನುವ ಸಲಹೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜ್ಯೋತಿ ಜೋಳದ, ಮುಖ್ಯಗುರು ಆರ್.ಭಜಂತ್ರಿ, ವಲಯ ಮೇಲ್ವಿಚಾರಕಿ ದೀಪಾ ಗೋಡ್ಸೆ, ಜ್ಞಾನ ವಿಕಾಸ ಸಮನ್ವಯಧಿಕಾರಿ ಜಯಶ್ರೀ.ಎಸ್.ಎಮ್, ಸೇವಾ ಪ್ರತಿನಿಧಿ ಸುವರ್ಣ ಅಂಗಡಿ ಮತ್ತು ಕಾರ್ಯಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸಂಘದ ಸದಸ್ಯರು ಪಾಲ್ಗೊಂಡಿದ್ದರು.