ಕೊರೊನಾ ಜಾಗೃತಿ ಅಭಿಯಾನ: ಉಚಿತ ಮಾಸ್ಕ ವಿತರಣೆ

ವಿಜಯಪುರ, ಏ.6-ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ನಗರದ ಗಾಂಧಿ ವೃತ್ತದಲ್ಲಿ ಕೊರೊನಾ ಜಾಗೃತಿ ಅಭಿಯಾನ ಹಾಗೂ ಉಚಿತ ಮಾಸ್ಕ ವಿತರಣಾ ಸಮಾರಂಭವು ಜರುಗಿತು.
ಸಂಸದ ರಮೇಶ ಜಿಗಜಿಣಗಿ ಕೊರೊನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೊರೊನಾ ಎರಡನೆ ಅಲೆಯು ವಿಶ್ವವ್ಯಾಪಿ ಮಾರಣಾಂತಿಕ ಕಾಯಿಲೆಯಾಗಿ ಹಬ್ಬುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇಂದು ಕೊರೊನಾ ಜಾಗೃತಿ ಅಭಿಯಾನ ಹಾಗೂ ಉಚಿತ ಮಾಸ್ಕ ವಿತರಣೆ ವಿಜಯಪುರ ಜಿಲ್ಲೆಯ ಗ್ರಾಮಾಂತರ ಹಾಗೂ ನಗರದ ಜನರಿಗೆ ಜಾಗೃತಿ ಅಭಿಯಾನದ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿರುವುದು ಮಾನವೀಯತೆಯನ್ನು ಪ್ರತಿಬಿಂಬಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಕೊರೋನಾ ಅಲೆಯು ಮತ್ತೆ ಮಾರಣಾಂತಿಕ ಬಿರುಗಾಳಿ ಬಿಸುತ್ತಿದೆ ಸಾರ್ವಜನಿಕರು ಮಾಸ್ಕ ಧರಿಸಿ ಅಂತರ ಕಾಪಾಡಿಕೊಂಡು ದೇಶ ಹಾಗೂ ನಾಡು ಸುರಕ್ಷಿತವಾಗಿ ಇರಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ಉರಿ ಬಿಸಿಲಿದ್ದರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾರ್ವಜನಿಕರಿಗೆ ಮಾಸ್ಕ ವಿತರಿಸಿ ಜಾಗೃತಿ ಮೂಡಿಸುವ ಅವರ ಸತತ ಕಾರ್ಯಕ್ರಮಗಳು ನನಗೆ ಸಂತೋಷ ತಂದಿದೆ. ನಾಡು ನುಡಿ ನೆಲ ಜಲ ಭಾಷಾಭಿಮಾನ ಕುರಿತಾಗಿ ಸಾಕಷ್ಟು ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನೀಯ ವಿಷಯವಾಗಿದೆ. ಇಂದು ಮಹಾರಾಷ್ಟ್ರ, ಕೇರಳ ಇನ್ನು ಕೆಲವು ರಾಜ್ಯಗಳಲ್ಲಿ ಸೂಕ್ಷ್ಮವಾಗಿ ಮಾನವನಿಗೆ ಗೊತ್ತಾಗದಂತೆ ವೈರಸಗಳು ಅಟ್ಯಾಕ ಮಾಡುತ್ತಿದ್ದು ಅಂತರ ಕಾಪಾಡಿಕೊಳ್ಳದೆ ಇದ್ದಲ್ಲಿ ಅದರ ಪಶ್ಚಾತ್ತಾಪ ಅವರು ಪಡೆದುಕೊಳ್ಳುತ್ತಾರೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಮೊದಲನೆ ಹಂತದ ಕಾರ್ಯಕ್ರಮದಲ್ಲಿ ಅಂಬೇಡ್ಕರ ವೃತ್ತದ ಬಳಿ 2000 ಮಾಸ್ಕಗಳನ್ನು ವಿತರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿತ್ತು. ಇಂದು ಗಾಂಧಿ ವೃತ್ತದ ಬಳಿ 5000 ಮಾಸ್ಕಗಳನ್ನು ನಮ್ಮ ವೇದಿಕೆಯು ಹಂಚುವುದರ ಮೂಲಕ ಚಾಲನೆ ನೀಡಿದೆ. ಯುವಕರು ಅಂತರ ಕಾಪಾಡಿಕೊಳ್ಳುವಲ್ಲಿ ನಿಷ್ಕ್ರೀಯತೆ ತೋರಿಸುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಕೊರೊನಾ ರೋಗವನ್ನು ದೂರವಿರಿಸಬೇಕಾಗಿದೆ ಎಂದರು.
ಇನ್ನೋರ್ವ ಅತಿಥಿಯಾಗಿ ಕರ್ನಾಟಕ ಸರ್ಕಾರ ರೈಲ್ವೆ ಬೋರ್ಡ್ ಡೈರೆಕ್ಟರ್ ಚಿದಾನಂದ ಚಲವಾದಿ ಹಾಗೂ ಮಹಿಳಾ ಘಟಕದ ಭಾರತಿ ಟಂಕಸಾಲಿ, ಎಮ್.ಎಮ್. ಖಲಾಸಿ, ವಸಂತರಾವ ಕೊರ್ತಿ, ಶಿವನಗೌಡ ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಧುರೀಣ ವಿನೋದ ಕೊಳೂರಗಿ, ಕೆ.ಕೆ. ಬನ್ನಟ್ಟಿ, ಆನಂದ ಸಾಗರ, ಎ.ಎಸ್.ಪಟೇಲ, ಪ್ರಕಾಶ ನಡುವಿನಕೇರಿ, ವಿಲಾಸ ಮಸೂತಿ, ಭೀಮಾಶಂಕರಯ್ಯ ವಿರಕ್ತಮಠ, ರವಿ ನಾಟಿಕಾರ, ಶ್ರೀಮತಿ ಬಡಿಗೇರ, ಕಾಶಿಬಾಯಿ ಹಡಪದ, ಮಹಾಂತೇಶ ಹಾದಿಮನಿ, ಶರಣಗೌಡ ಬಿರಾದಾರ. ಅಶೋಕ ಚವ್ಹಾಣ, ಸುನೀಲ ಚವ್ಹಾಣ, ಹುಸೇನಸಾಬ ದಳವಾಯಿ, ಪಾಂಡು ರಾಠೋಡ, ಸಿದ್ದನಗೌಡ ಬಿರಾದಾರ, ಅರ್ಜುನ ಬಳಗಾನೂರ, ಬಿ.ಎಂ. ಮಕ್ತೆದಾರ, ಎಸ್.ಬಿ. ಪಾಟೀಲ, ಎ.ಬಿ. ಮಕ್ತೆದಾರ, ಗುರುರಾಜ ಪಂಚಾಳ, ಬಾಸು ರಾಠೋಡ, ಶಂಕರ ರಾಠೋಡ ಮುಂತಾದವರು ಉಪಸ್ಥಿತರಿದ್ದರು.