ಕೊರೊನಾ ಜಾಗತಿಕ ಮನುಕುಲವನ್ನೇ ನಡುಗಿಸಿದೆ. : ಡಾ.ಸ.ಚಿ.ರಮೇಶ

ಹೊಸಪೇಟೆ ಮಾ30: ಕೊರೊನಾ ವೈರಸ್ ಪರಿಣಾಮದಿಂದ ಜಾಗತಿಕ ಮನುಸಂಕುಲನ ಹಿಂದೆದೂ ಅನುಭವಿಸದ ಹಾನಿ ಮತ್ತು ಉದ್ಯೋಗ ಪರಿಣಾಮಗಳನ್ನು ಅನುಭವಿಸುವಂತೆ ಮಾಡಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ವಿಷಾಧಿಸಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಜಾನಪದ ಅಧ್ಯಯನ ವಿಭಾಗದ ವತಿಯಿಂದ ‘ಕೋವಿಡ್-19 ಸಾಂಸ್ಕøತಿಕ ಸ್ಥಿತ್ಯಂತರಗಳು’ ಎಂಬ ವಿಷಯದ ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಲಕ್ಷಾಮ, ಭೂಕಂಪ, ಬರಗಾಲದಂಥ ಪ್ರಾಕೃತಿಕ ವಿಕೋಪಗಳಿಗಿಂತಲೂ ಕೊರೋನಾ ಇಡೀ ಜಗತ್ತೇ ತತ್ತರಿಸುವಂತೆ ಮಾಡಿದೆ. ರೈತರು, ಕೂಲಿ ಕಾರ್ಮಿಕ ಯಾರು ಕೊರೋನಾದಿಂದ ಸಾಯಲಿಲ್ಲ, ಬದಲಾಗಿ ಉನ್ನತ ಐಷಾರಾಮಿ ಜೀವನ ನಡೆಸುವವರು ಹೆಚ್ಚಾಗಿ ಕೊರೊನಾಕ್ಕೆ ಬಲಿಯಾದರು. ಕಷ್ಟ-ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸುವವರಿಗೆ ಯಾವುದೇ ರೋಗ ರುಜಿನಗಳು ಅಂಟುವುದಿಲ್ಲ ಸರಳ ಜೀವಗೆ ಯಾವುದೆ ಜೀವ ಭಯಬೇಕಾಗಿಲ್ಲಾ ಎಂದರು.
ಕೊರೋನಾದಿಂದ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ 10 ತಿಂಗಳುಗಳ ಕಾಲ ವೇತನ ನೀಡದೆ, ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲು ಅನಾನುಕೂಲತೆ ಉಂಟಾಗಿತ್ತು. ಈ ಆರ್ಥಿಕ ಬಿಕ್ಕಟ್ಟಿಗೆ ಸ್ಪಂದಿಸಿದ ಸರ್ಕಾರ ರೂ.3.52 ಕೋಟಿ ಅನುದಾನ ನೀಡಿದ್ದು ವಿಶ್ವವಿದ್ಯಾಲಯಕ್ಕೆ ನವಚೈತನ್ಯ ಬಂದಂತಾಗಿದೆ ಎಂದರು.
ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ.ಸಿ.ಆರ್.ಗೋವಿಂದರಾಜು ಮಾತನಾಡಿ, ಕೊರೋನಾಕ್ಕೆ ಇಡೀ ಮನುಕುಲವೇ ನಲುಗಿದೆ. ಶ್ರಮಿಕ ವರ್ಗಕ್ಕೆ ತೊಂದರೆಯಾಗಿದೆ ಎನ್ನುವುದು ಬಿಟ್ಟರೆ ಕೊರೋನಾ ಬರಲೇ ಇಲ್ಲ. ಐಷಾರಾಮಿ ಜೀವನ ನಡೆಸುವವರಿಗೆ ಮಾತ್ರ ರೋಗ ಬಂದಿದೆ. ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಹೆಬ್ಬಾಲೆ ಕೆ.ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ಡಾ.ಸಿ.ಟಿ.ಗುರುಪ್ರಸಾದ್ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ಮಧು ಬಿ.ಡಿ. ನಿರೂಪಿಸಿದರು. ಶ್ರೇಯಸ್ ಬಿ.ಎಸ್. ವಂದಿಸಿದರು.