ಕೊರೊನಾ : ಕೇಂದ್ರದಿಂದ ಜನ ಜಾಗೃತಿ

ನವದೆಹಲಿ, ಮೇ. 15- ಕೊರೊನಾ ಸೋಂಕು ಹೆಚ್ಚಳ ಸಮಯದಲ್ಲಿ ‌ಲಸಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಮೈ ಗೌ ಡಾಟ್ ಇನ್ ಮೂಲಕ ಕೇಂದ್ರ ಸರ್ಕಾರ ಈ ಅಭಿಯಾನವನ್ನು ಮುಂದಿನವಾರದಿಂದ ಆರಂಭಿಸಲಿದೆ.

ಜಾಗತಿಕವಾಗಿ ಫೇಸ್‍ಬುಕ್ ಮತ್ತು ಇನ್ಸ್‍ಟಾಗ್ರಾಂನಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದ ಅನುಮೋದಿತ ಲಸಿಕೆಗಳ ಕುರಿತಾದ ಸುಳ್ಳುಗಳನ್ನೂ ಒಳಗೊಂಡ 12 ದಶಲಕ್ಷ ತಪ್ಪು ಮಾಹಿತಿಯನ್ನು ಈಗಾಗಲೇ ತೆಗೆದು‌ಹಾಕಲಾಗಿದೆ.

ದೇಶದಲ್ಲಿ ಕೋವಿಡ್-19 ಸಂಬಂಧಿಸಿದ ತಪ್ಪು ಮಾಹಿತಿ ಹೇಗೆ ಪತ್ತೆ ಮಾಡಬೇಕು ಎಂದು ಶಿಕ್ಷಣ ಹಾಗೂ ಮಾಹಿತಿ ನೀಡಲು ಹೊಸ ಅಭಿಯಾನ ಪ್ರಾರಂಭಿಸುತ್ತಿದ್ದು ಇದರಿಂದ ಅವರು ಅಧಿಕೃತ ಮಾಹಿತಿ ನೀಡುವ ಅಭಿಯಾನ ಇದಾಗಿದೆ.

ಲಸಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು, ವಿಶ್ವಾಸಾರ್ಹ ಮೂಲಕ್ಕಾಗಿ ನೋಡುವುದು, ವಾಸ್ತವಗಳನ್ನು ಹಂಚಿಕೊಳ್ಳುವುದು, ವದಂತಿ ನಿರಾಕರಿಸುವುದು, ವಿಶ್ವಾಸಾರ್ಹ ಮೂಲಗಳಿಂದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಬಂಧುಮಿತ್ರರಿಗೆ ಅವರು ತಪ್ಪಾದ ಮಾಹಿತಿ ಹಂಚಿಕೊಂಡಾಗ ಮಾಹಿತಿ ನೀಡುವುದು, ಯಾವುದೇ ಮಾಹಿತಿ ಷೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಈ ಅಭಿಯಾನ ಮತ್ತು ವೆಬ್‍ಸೈಟ್ ಅನ್ನು ಇಂಗ್ಲಿಷ್ ಹಾಗೂ ಹಿಂದಿ, ತಮಿಳು, ತೆಲುಗು, ಒರಿಯಾ, ಮಲಯಾಳಂ, ಮರಾಠಿ, ಕನ್ನಡ, ಗುಜರಾಥಿ ಮತ್ತು ಬಂಗಾಳಿ ಒಳಗೊಂಡು 9 ಭಾರತೀಯ ಭಾಷೆಗಳಲ್ಲಿ ನಡೆಸಲಿದೆ.

ಈ ಅಭಿಯಾನದಲ್ಲಿ ವೈದ್ಯರು ಕೋವಿಡ್-19 ಕುರಿತಾದ ಬಹಳಷ್ಟು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.