ಕೊರೊನಾ ಕಾರಣಕ್ಕೆ ದರ ಹೆಚ್ಚಳ; ಕ್ರಮಕ್ಕೆ ಮನವಿ

ಜಗಳೂರು.ಮೇ.೧೮; ತರಕಾರಿ, ಕಿರಾಣಿ, ಹಣ್ಣು ದರ ನಿಗದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಿಗಳಿಂದಸಾರ್ವಜನಿಕರಿಗೆ ರಕ್ಷಣೆ ಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಆದ ಪರಿಣಾಮ ಕೆಲವೊಂದು ಹಣ್ಣು ಹಂಪಲುಗಳ ಅಂಗಡಿ.ಕಿರಾಣಿ ಅಂಗಡಿ. ಮಾಂಸ ಅಂಗಡಿ. ತರಕಾರಿ ಗುಟ್ಕಾ. ಮಧ್ಯಪಾನ ಅಂಗಡಿಗಳ ವ್ಯಾಪಾರಿಗಳು ರಾಜಾ ರೋಷವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮುಖಾಂತರ ಜನರನ್ನು ಲೂಟಿ ಮಾಡುತ್ತಿದ್ದಾರೆಇದನ್ನು ತಡೆಯಲು ರಾಜ್ಯ ಸರ್ಕಾರ ನೀಡಿರುವ ಎಚ್ಚರಿಕೆಗಳು ಮತ್ತು ಆದೇಶಗಳು ಸಾರ್ವಜನಿಕರಿಗೆ ಯಾವುದೇ ಫಲ ಕೊಟ್ಟಿಲ್ಲ ಎಂಬಂತೆ ಕಾಣುತ್ತದೆ ಮಾರಾಟವಾಗುವ ಪ್ರತಿಯೊಂದು ದಿನನಿತ್ಯ ಬಳಸುವ ಅಗತ್ಯ ವಸ್ತುವಿನ ದರ ನಿಗದಿ ಮಾಡುವುದು ಅತಿ ಅಗತ್ಯವಿದೆ. ಪಟ್ಟಣದಲ್ಲಿ ಕೆಲವೊಂದು ಕಿರಣಿ ಮತ್ತು ಇತರೆ  ಅಂಗಡಿಗಳ ಮಾಲೀಕರು ಮತ್ತು ವ್ಯಾಪಾರಿಗಳು ದಿನ ನಿತ್ಯ ಉಪಯೋಗಿಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಇದನ್ನು  ಪ್ರಶ್ನೆ ಮಾಡಿದರೆ ಸ್ಟಾಕ್ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ. ಲಾಕ್ಡೌನ್ ಆದ ಪರಿಣಾಮ ಗ್ರಾಮೀಣ ಭಾಗದ ಹಳ್ಳಿಗಳಲ್ಲಂತೂ ತರಕಾರಿ ಕಿರಾಣಿ ಹಣ್ಣು ಮಧ್ಯಪಾನ ಗುಟ್ಕಾ ಅಂಗಡಿಗಳ ಚಿಲ್ಲರೆ ವ್ಯಾಪಾರಿಗಳು ಕಡಿಮೆ ಬೆಲೆಯಲ್ಲಿ ತಂದು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.