ಕೊರೊನಾ ಕಳೆದ ವರ್ಷಕ್ಕಿಂತ ಈ ವರ್ಷ ಅತ್ಯಂತ ಅಪಾಯಕಾರಿ: ಡಬ್ಯು‌ಎಚ್ ಒ

ಜಿನೇವಾ,ಮೇ.15- ಜಗತ್ತಿನಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದ ಕೊರೊನಾ ಸೋಂಕಿನ ಅಲೆ ಎರಡನೇ ವರ್ಷ ಅತ್ಯಂತ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮೊದಲ ವರ್ಷಕ್ಕಿಂತ ಎರಡನೇ ವರ್ಷ ಸೋಂಕಿನ ಪ್ರಮಾಣ ಹೆಚ್ಚಳ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಇದರ ನಡುವೆ ಜುಲೈ ತಿಂಗಳಲ್ಲಿ ಜಪಾನಲ್ಲಿ ಟೋಕಿಯೋ ಒಲಿಂಪಿಕ್ ನಡೆಯುತ್ತಿರುವುದು ಕೂಡ ಸೋಂಕು ಮತ್ತಷ್ಟು ಹೆಚ್ಚಳಕ್ಕೆ ಮುನ್ಸೂಚನೆ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ‌‌. ಟೆಡ್ರೋಸ್ ಅದಾನಂ ಗ್ಯಾಬ್ರಿಯಾಸಸ್ , ಮೊದಲ ವರ್ಷ ಕಾಣಿಸಿಕೊಂಡ ಸೋಂಕಿಗಿಂತ ಸೋಂಕು ಈ ವರ್ಷ ಅತ್ಯಂತ ಭೀಕರವಾಗಿದೆ ಹೀಗಾಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.

ಜುಲೈ ಕೊನೆಯ ವಾರ ಆರಂಭವಾಗಲಿರುವ ಒಲಂಪಿಕ್ ಮುನ್ನ ಜಪಾನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಆದರೂ ಸೋಂಕು ಪ್ರಮಾಣ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಪಾನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ ಪಂದ್ಯಾವಳಿಯಲ್ಲಿ ಸರಿ ಸುಮಾರು ಮೂರೂವರೆ ಲಕ್ಷ ಮಂದಿ ಕ್ರೀಡಾಪಟುಗಳು ಸಹಾಯಕ ಸಿಬ್ಬಂದಿ ಮತ್ತು ಸಿಬ್ಬಂದಿಗಳಲ್ಲಿ ಕ್ರೀಡಾಕೂಟವನ್ನು ರದ್ದು ಮಾಡುವಂತೆ ಆಗ್ರಹ ಕೇಳಿಬಂದಿದೆ ಆದರೂ ನಡೆಯುತ್ತಿದೆ ಇದರಿಂದ ಸೋಂಕು ಮತ್ತಷ್ಡು ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ

ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ.ಇದು ಮತ್ತಷ್ಟು ಆತಂಕವನ್ನು ಹೆಚ್ಚು ಮಾಡಿದೆ ಜಗತ್ತಿನ ಎಲ್ಲ ದೇಶಗಳ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಜಗತ್ತಿನ ವಿವಿಧ ದೇಶಗಳಲ್ಲಿ ಸೋಂಕು ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಎಲ್ಲ ದೇಶಗಳು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೂಡ ಅವರು ಸಲಹೆ ನೀಡಿದ್ದಾರೆ.