ಕೊರೊನಾ ಕರ್ಫ್ಯೂಗೆ ಮಣಿದ ಜನತೆ; ದಾವಣಗೆರೆ ಸಂಪೂರ್ಣ ಸ್ತಬ್ಧ

ದಾವಣಗೆರೆ.ಏ.೨೮; ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಕೊರೊನಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ವ್ಯಾಪಾರಸ್ಥರು ಅಂಗಡಿ‌‌ಗಳನ್ನು ಮುಚ್ಚಿ ಕರ್ಫ್ಯೂ ಬೆಂಬಲಿಸಿದರು.ಬೆಳಗ್ಗೆಯಿಂದ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ಮನೆಗಳಿಗೆ ಸೇರಿಕೊಂಡರು. ಹಾಲು, ಹಣ್ಣು, ತರಕಾರಿ, ರೇಷನ್ ಸೇರಿದಂತೆ ಎಲ್ಲ ಅಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಅವಕಾಶವಿತ್ತು.ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು ಪ್ರತಿ ಸರ್ಕಲ್ ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. 10 ಗಂಟೆ ಆಗುತ್ತಿದಂತೆ  ಪೊಲೀಸರು  ಅಂಗಡಿಗಳನ್ನು ಮುಚ್ಚಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ  ವಿಧಿಸುತ್ತಿದ್ದಾರೆ.ತರಕಾರಿ ವ್ಯಾಪಾರಿಗಳು, ರೈತರು 10 ಗಂಟೆಯೊಳಗೆ ಸಾಧ್ಯವಾದಷ್ಟು  ಮಾರಾಟ ಮಾಡಿ,ಉಳಿದಿದ್ದನ್ನು ಗಂಟು ಕಟ್ಟಿಕೊಂಡು ಮನೆಗೆ ಹೋದರು. ಬೆಳಗ್ಗೆ 12 ಗಂಟೆವರೆಗೂ ಆದರೂ ಅವಕಾಶ ಕಲ್ಪಿಸಬೇಕು ಎಂದು ರೈತರು, ವ್ಯಾಪಾರಸ್ಥರು ಸರ್ಕಾರವನ್ನು ಆಗ್ರಹಿಸಿದರು. ನಾವು ಊರಿಂದ ತರಕಾರಿ ತಂದು ವ್ಯಾಪಾರ ಪ್ರಾರಂಭವಾಗುವುದೇ 8 ಗಂಟೆಯಿಂದ ಎರಡು ತಾಸಿನಲ್ಲಿ ಎಲ್ಲ ತರಕಾರಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ 12 ಗಂಟೆ ವರೆಗೂ ಆದರೂ ಅವಕಾಶ ನೀಡಬೇಕು ಎಂದು ವಿವಿಧೆಡೆಯಿಂದ ಬಂದ ರೈತರು ಒತ್ತಾಯಿಸಿದರು. .ನಗರದ ಎಪಿಎಂಸಿ ಮಾರುಕಟ್ಟೆ, ಗಡಿಯಾರ ಕಂಬ, ಕಾಯಿ ಪೇಟೆ, ಕೆ.ಆರ್ ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆ ಪೊಲೀಸರು 10 ಗಂಟೆ ಆಗುತ್ತಿದ್ದಂತೆ ಎಲ್ಲ ಬಂದ್ ಮಾಡಿಸಿದರು. ಇನ್ನು ಕಟ್ಟಡ ಕಾರ್ಮಿಕರಿಗೆ ಯಾವುದೇ ನಿರ್ಭಂದ ವಿಧಿಸಿಲ್ಲದಿದ್ದರಿಂದ ನಗರದ ಕಟ್ಟಡ ಕಾಮಗಾರಿ ಅಭಿವೃದ್ಧಿ, ಪಾದಚಾರಿ ಮಾರ್ಗ ಕಾಮಗಾರಿಗಳು ನಡೆಯುತ್ತಿವೆ. ಮರಳು, ಎಂ ಸ್ಯಾಂಡ್, ಜಲ್ಲಿ ಮಾರಾಟ ಸಾಗಿತ್ತು. ಬೀಜ, ಗೊಬ್ಬರ, ಔಷಧಿ ಕೊಳ್ಳು ಅವಕಾಶ ಕಲ್ಪಿಸಿದ್ದು, ರೈತರ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತಮ್ಮದೇ ಟ್ರ್ಯಾಕ್ಟರ್ ಗಳಲ್ಲಿ ಖರೀಸಿ ವಸ್ತುಗಳನ್ನು ಹಾಕಿಕೊಂಡು ಹೋಗುತ್ತಿದ್ದಾರೆ.ಖಾಸಗಿ, ಸರ್ಕಾರಿ ಬಸ್ ಸೇರಿದಂತೆ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿತ್ತು.ಬ್ಯಾಂಕ್ ಗಳು, ಎಟಿಎಂ,ಸರ್ಕಾರಿ ಕಚೇರಿಯ ಸಿಬ್ಬಂದಿ ಎಂದಿನಂತೆ ಕೆಲಸ ನಿರ್ವಹಿಸಿದರು.