ಕೊರೊನಾ ಔಷಧ ಜಿಎಸ್‌ಟಿ ರದ್ದತಿಗೆ ಪ್ರಿಯಾಂಕಾ ಆಗ್ರಹ


ನವದೆಹಲಿ, ಮೇ ೨೮- ಕೊರೊನಾ ಸೋಂಕಿಗೆ ನೀಡುವ ಔಷಧ ಪರಿಕರಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿಯನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲ ಜೀವರಕ್ಷಕ ಔಷಧ ಸಲಕರಣೆಗಳ ಮೇಲೆ ಜಿಎಸ್‌ಟಿ ತೆರಿಗೆ ತೆಗೆದು ಹಾಕಬೇಕೆಂದು ಹೇಳಿದರು.
ಕೋವಿಡ್ ವಿರುದ್ದ ಹೋರಾಡಲು ಸಾಮಾನ್ಯವಾಗಿ ಬಳಸುವ ಸಾಧನಗಳು ಮತ್ತು ಅವುಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿ ದರ ಪಟ್ಟಿಯನ್ನು ಅಪ್‌ಲೋಡ್ ಮಾಡಿದ್ದಾರೆ.
ಇಂದು ಈ ಸಂಬಂದ ಜಿಎಸ್‌ಟಿ ಮಂಡಳಿ ಸಭೆ ಸೇರಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.