ಕೊರೊನಾ ಎರಡನೇ ಅಲೆ ಭೀತಿ ಫೀಲ್ಡ್‍ಗಿಳಿದ ಖಾಕಿ ಪಡೆ: ಸಾರ್ವಜನಿಕರಿಗೆ ದಂಡ

ಅಥಣಿ,ಮಾ24 : ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೆÇೀಲೀಸ್ ಇಲಾಖೆ, ಕಂದಾಯ ಇಲಾಖೆ, ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಟ್ಟಣದ ಅಂಬೇಡ್ಕರ್ ವೃತ್ತ ಹಾಗೂ ಡಿ.ಬಿ, ಪವಾರ ದೇಸಾಯಿ ವೃತ್ತಗಳಲ್ಲಿ ಮಾಸ್ಕ ಧರಿಸದ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ತಹಶೀಲ್ದಾರ, ಡಿವೈಎಸ್ಪಿ, ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳು ಮಾಸ್ಕ ಧರಿಸದೆ ಅಲೆದಾಡುತ್ತಿರುವ ಜನರಿಗೆ ದಂಡ ವಿಧಿಸಿದರು.ಬೆಳಗ್ಗೆ 10 ಘಂಟೆಯಿಂದ ಕಾರ್ಯಚರಣೆಯಲ್ಲಿ ತೊಡಗಿದ ಅಧಿಕಾರಿಗಳು, ಪೆÇಲೀಸರು ಮತ್ತು ಸಿಬ್ಬಂದಿಗಳು ಮಾಸ್ಕ ಧರಿಸದೆ ಅಲೆದಾಡುತ್ತಿದ್ದವರಿಗೆ ದಂಡ ವಿಧಿಸಿ ಸಾರ್ವಜನಿಕರಲ್ಲಿ ಕೊರೋನಾ ಎರಡನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು.
ಪಟ್ಟಣದಲ್ಲಿ ಪೆÇೀಲೀಸರ ಧಿಡೀರ್ ಕಾರ್ಯಾಚರಣೆಯಿಂದ ಬೈಕ್ ಸವಾರರಲ್ಲಿ ಕೆಲಹೊತ್ತು ಗೊಂದಲ ವಾತಾವರಣ ಕಂಡುಬಂತು. ಮಾಸ್ಕ್ ಇದ್ದರು ಸಹ ಜೇಬಿನಲ್ಲಿಟ್ಟು ಅಡ್ಡಾಡುತ್ತಿದ್ದ ಸಾರ್ವಜನಿಕರು ಈ ಕಾರ್ಯಾಚರಣೆಯಿಂದ ತಮ್ಮ ತಮ್ಮ ಜೇಬಿನಿಂದ ಮಾಸ್ಕ್ ತೆಗೆದು ಧರಿಸಿಕೊಳ್ಳುವ ದೃಶ್ಯ ಕಂಡುಬಂತು.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಎರಡನೆ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಅದರ ನಿಯಂತ್ರಣಕ್ಕೆ ಸರ್ಕಾರ ಬಿಗಿಯಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾಸ್ಕ ಧರಿಸದೆ ಅಲೆದಾಡುತ್ತಿರುವವರಿಗೆ ದಂಡ ವಿಧಿಸಲಾಗುತ್ತಿದೆ. ಮಾಸ್ಕ ಕಡ್ಡಾಯವಾಗಿದೆ ಜೊತೆಯಲ್ಲಿ ಸಾಮಾಜಿಕ ಅಂತರವು ಕಾಯಬೇಕು ಹಾಗೂ ಸಾರ್ವಜನಿಕರೆಲ್ಲರು ಸರಕಾರದ ನಿಯಮಾವಳಿಗಳಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಈ ವೇಳೆ ಪಿಎಸ್‍ಐ ಕುಮಾರ ಹಾಡಕಾರ ಧ್ವನಿವರ್ಧಕದ ಮೂಲಕ ಸಾರಿಗೆ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು ದಿನಾಲೂ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವ ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್‍ನಲ್ಲಿ ಕರ್ತವ್ಯ ನಿರ್ವಹಿಸುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಥಣಿ ತಹಶೀಲ್ದಾರ ದುಂಡಪ್ಪ ಕೋಮಾರ, ಉಪ ತಹಶೀಲ್ದಾರ ಮಹಾದೇವ ಬಿರಾದಾರ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚೌಗಲಾ, ಸೇರಿದಂತೆ ಪೆÇೀಲೀಸರು, ಪೌರಕಾರ್ಮಿಕರು ಇದ್ದರು,