ಕೊರೊನಾ ಎರಡನೇ ಅಲೆ : ಅಧಿಕಾರಿಗಳ ಸಭೆ

ಲಿಂಗಸೂಗೂರು.ಏ.೨೬- ಕೋವಿಡ್ ೧೯ ಎರಡನೇ ಹಂತದ iಹಾಮಾರಿ ರೋಗಗಳ ನಿಯಂತ್ರಣ ಬಗ್ಗೆ ಮಾಹಿತಿ ತಿಳಿಯಲು ಶಾಸಕ ಡಿಎಸ್ ಹುಲಗೇರಿ ಇವರು ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.
ಈಗಾಗಲೆ ಲಿಂಗಸುಗೂರು ತಾಲ್ಲೂಕಿನಲ್ಲಿ ಕೋವಿಡ ಸೊಂಕು ದಿನ ಬೆಳಗಾದರೆ ಸಾಕು ಕೊವಿಡ್ ಮಾಹಾಮಾರಿ ರೋಗಗಳ ನಿಯಂತ್ರಣ ಮಾಡಲು ಮುಂದಾಗಬೇಕು ಎಂದು ಶಾಸಕರು ಹೇಳಿದರು.
ಲಿಂಗಸುಗೂರು ಪುರಸಭೆ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿ ಮತ್ತು ಮುದಗಲ್ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಾಗ್ರತಿ ಮುಡಿಸಬೇಕು
ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕರ ಬಳಸಿಕೊಂಡು ಪ್ರತಿದಿನ ಕೋರೋನಾ ಎರಡನೇ ಹಂತದ ಮಾಹಮಾರಿ ರೋಗಗಳ ನಿಯಂತ್ರಣ ಮಾಡಲು ಸಾರ್ವಜನಿಕರು ಮಾಸ್ಕ್ ಸ್ಯಾನಿಟರಿ ಬಳಸಬೇಕು.ತಾಲುಕಿನ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಗ್ರಾಮಪಂಚಾಯತ್ ಅಧಿಕಾರಿಗಳು
ನಿಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಬೇಕು ಮುಂದಾಗಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಕಸವಿಲೆವಾರಿ ಆಗುತ್ತಿಲ್ಲ ಎಂದು ಶಾಸಕರು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಕಿಡಿಕಾರಿದರು
ಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ಕೂ ಕಾರಣ ಕೊಡುತ್ತಿರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಕೂಡಲೇ ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೆಕಾಗುತ್ತದೆ. ಕೂಡಲೇ ನಿಮ್ಮ ನಡುವಳಿಕೆಗಳು ಬದಲಾವಣೆ
ಮಾಡಿಕೊಳ್ಳಲು ಖಡಕ್ಕಾಗಿ ಮುಖ್ಯಾದಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೆವಿ ತಹಶೀಲ್ದಾರ ನಾಗಪ್ರಸಾದ ಸಿಪಿಐ ರಮೇಶ್ ಕುಲಕರ್ಣಿ ಬಿಇಒ ಹೊಂಬಣ್ಣ ರಾಠೊಢ್ ಆರೋಗ್ಯ ಇಲಾಖೆ ಅಧಿಕಾರಿಗಳಾದ ಅಮರೇಶ ಪಾಟೀಲ ಡಾಕ್ಟರ್ ರುದ್ರಗೌಡ ಪಾಟೀಲ ಪಿಎಸ್‌ಐ ಪ್ರಕಾಶ್ ಡಂಬಳ ಪ್ರವಿಣ ಭೋಗಾರ ಮರಿಯಪ್ಪ ಸೇರಿದಂತೆ ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳು ಭಾಗವಹಿಸಿದ್ದರು.