ಕೊರೊನಾ ಉದ್ಯೋಗ ಕಳೆದುಕೊಂಡ ಐದು ಲಕ್ಷ ಜನ

ತಿರುವನಂತಪುರ, ಜ.೭-ಕೊರೋನಾ ಸೋಂಕಿನಿಂದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದ ಹಿನ್ನೆಲೆ, ವಿದೇಶದಿಂದ ಕೇರಳಕ್ಕೆ ಮರಳಿದ ೫.೫೨ ಲಕ್ಷ ಜನರು ಉದ್ಯೋಗ ನಷ್ಟದ ಕಾರಣ ನೀಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಕಳೆದ ವರ್ಷ ಮೇ ತಿಂಗಳಿನಿಂದ ಕೇರಳಕ್ಕೆ ಬಂದಿರುವ ಕುರಿತು ಅನಿವಾಸಿ ಕೇರಳೀಯ ವ್ಯವಹಾರಗಳ ಇಲಾಖೆ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ೨೦೨೦ ಮೇ ಮೊದಲ ವಾರ ಮತ್ತು ಈ ವರ್ಷದ ಜನವರಿ ೪ ರ ನಡುವೆ ೮.೪೩ ಲಕ್ಷ ಜನರು ವಿದೇಶಗಳಿಂದ ಕೇರಳಕ್ಕೆ ಮರಳಿದರು.

ಈ ಪೈಕಿ ಬರೋಬ್ಬರಿ ೫.೫೨ ಲಕ್ಷ ಜನರು ತಾವು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆಂದು ಕಾರಣ ತಿಳಿಸಿದ್ದಾರೆ.ಇದರ ನಡುವೆ ಬರೀ ಕಳೆದ ೩೦ ದಿನಗಳಲ್ಲಿ ೧.೪೦ ಲಕ್ಷ ಜನರು ಹಿಂದಿರುಗಿರುವುದು ಗಮನಾರ್ಹ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಅಂತರರಾಷ್ಟ್ರೀಯ ಔದ್ಯೋಗಿಕ ತಜ್ಞ ಪ್ರೊಫೆಸರ್ ಎಸ್. ಇರುಡಯಾ ರಾಜನ್, ಕೋವಿಡ್ ತಗ್ಗಿದರೆ ಮುಂಬರುವ ದಿನಗಳಲ್ಲಿ ವಲಸೆ ಕಾರ್ಮಿಕರು ಹೊಸ ಪ್ರದೇಶಗಳಿಗೆ ಹೊರಡುತ್ತಾರೆ ಎಂದರು.

ಇನ್ನು ತಿರುವನಂತಪುರಂನ ಅಭಿವೃದ್ಧಿ ಅಧ್ಯಯನ ಕೇಂದ್ರದ ಅಂತರರಾಷ್ಟ್ರೀಯ ವಲಸೆಯ ಕುರಿತಾದ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಂಶೋಧನಾ ಘಟಕದ ಅಧ್ಯಕ್ಷ ಪ್ರೊಫೆಸರ್ ರಾಜನ್, ಕೇರಳವು ೨೦೧೮ ರಲ್ಲಿ ವಾರ್ಷಿಕ ೮೫,೦೦೦ ಕೋಟಿ ರೂ. ರವಾನೆ ಕಂಡಿದ್ದು, ಇದು ೨೦೨೦ ರಲ್ಲಿ ೧೦೦,೦೦೦ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರವಾನೆಗಳಲ್ಲಿ ಶೇಕಡಾ ೧೦ ರಿಂದ ೧೫ ರಷ್ಟು ಇಳಿಕೆಯಾಗಬಹುದು ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಹೊಸ ಕಾರಿಡಾರ್‌ಗಳಲ್ಲಿ ಒಂದು ಆರೋಗ್ಯ ಕ್ಷೇತ್ರವಾಗಬಹುದು ಎಂದು ಅವರು ಹೇಳಿದರು. ಆದರೆ ವಲಸೆಯ ಮುಂದಿನ ಪಥದ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ಪಡೆಯಲು ನಾವು ಇನ್ನೊಂದು ವರ್ಷ ಕಾಯಬೇಕಾಗಿದೆ ಎಂದು ನುಡಿದಿದ್ದಾರೆ.

ಮತ್ತೊಂದೆಡೆ ಕೇರಳದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎನ್‌ಆರ್‌ಐ ಠೇವಣಿಗಳ ಪೈಕಿ ಶೇಕಡಾ ೨೯ ರಷ್ಟನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ (ಎನ್‌ಆರ್‌ಐ ಸೆಲ್) ಅಜಯ ಕುಮಾರ್ ಮಾತನಾಡಿ, ಈ ಹಣಕಾಸಿನ ಮೊದಲ ಆರು ತಿಂಗಳಲ್ಲಿ ಸ್ಥಿರ ಬೆಳವಣಿಗೆಯನ್ನು ಕಂಡಿದ್ದೇವೆ.ಪ್ರತಿ ತಿಂಗಳು, ಎಸ್‌ಬಿಐನಲ್ಲಿ ಎನ್‌ಆರ್‌ಐ ಠೇವಣಿ ೩೦೦ ಕೋಟಿ ರೂ.ಇದಕ್ಕೆ ಕಾರಣಗಳಿಗಾಗಿ ಒಂದು ಸಂಯೋಜನೆ ಇದೆ ಎಂದಿದ್ದಾರೆ.