ಕೊರೊನಾ ಇಳಿಕೆ : ದಿನನಿತ್ಯದ ವಸ್ತುಗಳ ಖರೀದಿಗೆ ಒತ್ತಾಯ

ರಾಯಚೂರು.ಜೂ.೦೮-ಕರ್ನಾಟಕ ರಾಜ್ಯದಲ್ಲಿ ಎಪ್ರಿಲ್ ೨೦೨೧ರಿಂದ ಕೋವಿಡ್-೧೯ ಕರೋನಾ ಹರಡುವ ೨ನೇ ಅಲೆಯ ಕಾರಣ ವಿವಿಧ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ ಆದೇಶಿಸಲಾಗಿದೆ.
ಸದರಿ ಆದೇಶವನ್ನು ಸರಕಾರ ಜೂನ್ ೧೪ ವರೆಗೆ ವಿಸ್ತರಿಸಿದೆ. ಈ ಆದೇಶದಿಂದ ಬಹುತೇಕ ಬಡ ಜನತೆ ತಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ವಿಶೇಷವಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುವರು ಕಷ್ಟದಲ್ಲಿದ್ದಾರೆ. ಇದರ ನಡುವೆ ಪ್ರಕರಣ ಹೆಚ್ಚಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿ ನಾಲ್ಕು ದಿನಗಳಿಗೆ ಒಮ್ಮೆ ಬೆಳಿಗ್ಗೆ ೬.೦೦ ರಿಂದ ೨.೦೦ ರ ವರೆಗೆ ದಿನ ಬಳಕೆ ಸಾಮಾನು ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಜನ ಹೆಚ್ಚು ಸೇರುತ್ತಿರುವದು ಕಂಡು ಬಂದಿದೆ.
ಆದರೆ, ಜಿಲ್ಲಾಡಳಿತ ಅದನ್ನು ತಡೆಗಟ್ಟಲು ಹಲವು ಕ್ರಮ ಕೈಗೊಂಡಿದೆ. ತರಕಾರಿ ಹಾಗೂ ಹಣ್ಣು ವ್ಯಾಪಾರಸ್ಥರು ಅಗತ್ಯ ವಸ್ತುಗಳ ಖರೀಧಿಗೆ ನೀಡಲಾದ ಅವಧಿಯಲ್ಲಿ ಮಾರಾಟವಾಗದೇ ಉಳಿದ ತರಕಾರಿ ಮತ್ತು ಹಣ್ಣುಗಳನ್ನೇನು ಮಾಡುವದೆಂದು ಆತಂಕದಲ್ಲಿದ್ದಾರೆ.
ಈಗ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕರೋನಾ ಪಾಜಿಟೀವ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿದ್ದು ಕಂಡು ಬಂದಿದೆ. ಈಗಲಾದರೂ ಜಿಲ್ಲಾಡಳಿತ ಜಿಲ್ಲೆಯಲ್ಲಿ ಪ್ರತಿದಿನ ಬೆಳಿಗ್ಗೆ ೬.೦೦ ರಿಂದ ೧೦.೦೦ ಗಂಟೆಯವರೆಗೆ ಅಗತ್ಯ ದಿನಬಳಕೆ ವಸ್ತುಗಳ ಖರೀಧಿಗೆ ಅವಕಾಶ ಮಾಡಿಕೊಡಬಹುದಾಗಿದೆ.
ರಾಜ್ಯದಲ್ಲಿಯೇ ಬೆಂಗಳೂರು ನಂತರ ಅತೀ ಹೆಚ್ಚು ಕರೋನಾ ಪ್ರಕರಣಗಳು ಕಂಡ ಮೈಸೂರು ಮತ್ತು ಕಲಬುರಗಿ ಜಿಲ್ಲಾಡಳಿತ ಹಾಗೂ ಬಹುತೇಕ ಜಿಲ್ಲೆಗಳಲ್ಲಿಯೂ ಬೆಳಿಗ್ಗೆ ೬.೦೦ ರಿಂದ ೧೦.೦೦ ರವೆರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುತ್ತಾರೆ. ಹಂತ ಹಂತವಾಗಿ ಸರಕಾರವೂ ಕೂಡ ಇನ್ನುಳಿದ ನಿರ್ಬಂಧವನ್ನು ಸಡಿಲಿಕೆ ಮಾಡುವ ಚಿಂತನೆ ನಡೆಸಿರುವದು ವರದಿಯಾಗಿದೆ.
ಆದ್ದರಿಂದ, ರಾಯಚೂರು ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆಯಲ್ಲಿ ಜಾರಿ ಮಾಡಿರುವ ನಾಲ್ಕು ದಿನಗಳಿಗೆ ಒಮ್ಮೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾದ ಅವಕಾಶವನ್ನು ಪ್ರತಿದಿನ ಬೆಳಿಗ್ಗೆ ೬.೦೦ ರಿಂದ ೧೦.೦೦ ರವರೆಗೆ ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.