ಕೊರೊನಾ ಇಂದೂ ಭಾರಿ ಏರಿಕೆ, 6150ಜನರಿಗೆ ಸೋಂಕು ,39 ಸಾವು

ಬೆಂಗಳೂರು, ಏ.6- ರಾಜ್ಯದಲ್ಲಿ ಇಂದೂ ಕೊರೊನಾ ಬಾರಿ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕು ಪ್ರಕರಣಗಳು ಆರು ಸಾವಿರ ಗಡಿದಾಟಿದೆ.
ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಹೊಸ ಸೋಂಕು ಪ್ರಕರಣಗಳ ಸಂಖ್ಯೆ 4500 ರ ಸನಿಹದಲ್ಲಿದೆ. ಇಂದು ಸಾವಿಗೀಡಾಗಿರುವ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 39 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಬೆಂಗಳೂರು ನಗರ ಒಂದರಲ್ಲೇ 26 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಧಾರವಾಡ , ಮೈಸೂರುನಲ್ಲಿ ತಲಾ ಮೂವರು, ಕಲ್ಬುರ್ಗಿಯಲ್ಲಿ ಇಬ್ಬರು, ಬೀದರ್, ಬೆಂಗಳೂರು ಗ್ರಾಮಾಂತರ ಬಳ್ಳಾರಿ, ಕೋಲಾರ, ಮಂಡ್ಯದಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 45 ಸಾವಿರ ಗಡಿದಾಟಿದೆ.
ಇಂದು ರಾಜ್ಯದಲ್ಲಿ6150 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು3487ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 39 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1026584ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು968762 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 45107 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12696 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 351 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 4266ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 455025ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 26 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4693ಕ್ಕೆ ಏರಿಕೆಯಾಗಿದೆ.
ಇಂದು2417ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ417726 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು32605 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 18, ಬಳ್ಳಾರಿ 87, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 80, ಬೀದರ್ 167, ಚಾಮರಾಜನಗರ 05, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 29, ಚಿತ್ರದುರ್ಗ 21, ದಕ್ಷಿಣ ಕನ್ನಡ 89,ದಾವಣಗೆರೆ 47, ಧಾರವಾಡ 43, ಗದಗ 12, ಹಾಸನ 110, ಹಾವೇರಿ 05, ಕಲಬುರಗಿ 261, ಕೊಡಗು 22, ಕೋಲಾರ 56, ಕೊಪ್ಪಳ 20, ಮಂಡ್ಯ 102, ಮೈಸೂರ 237, ರಾಯಚೂರು 29, ರಾಮನಗರ 14, ಶಿವಮೊಗ್ಗ 49, ತುಮಕೂರು 157, ಉಡುಪಿ57, ಉತ್ತರ ಕನ್ನಡ 66, ವಿಜಯಪುರ 22, ಯಾದಗಿರಿ 16.