ಕೊರೊನಾ ಇಂದು ದಾಖಲೆಯ ಇಳಿಕೆ

ಬೆಂಗಳೂರು ನ. 2 ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಭಾರಿ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಇಳಿಮುಖವಾಗಿವೆ. ಹಾಗೆಯೇ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿ ಗುಣಮುಖರಾಗುವ ಸಂಖ್ಯೆಯು ಹೆಚ್ಚಾಗಿದೆ.


ಕಳೆದ 18 ದಿನಗಳಿಂದ ಸತತವಾಗಿಸೊಂಕು ಪ್ರಕರಣ ಇಳಿಕೆ ಆಗುತ್ತಿದೆ ಚೇತರಿಕೆ ಪ್ರಕರಣಗಳು ಏರಿಕೆ ಕಂಡಿವೆ. ಇಂದು ರಾಜ್ಯದಲ್ಲಿ ಸೋಂಕು ಪ್ರಕರಣಗಳು ಮೂರು ಸಾವಿರಕ್ಕಿಂತ ಕಡಿಮೆಯಾಗಿದೆ ರಾಜಧಾನಿ ಬೆಂಗಳೂರಿನಲ್ಲಿ ಪ್ರಕರಣಗಳು 1500 ಆಸುಪಾಸಿಗೆ ಬಂದುನಿಂತಿದೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸೋಂಕು ಇಳಿಕೆಯಾಗಿ ಕರೋನಾ ನಿಯಂತ್ರಣಕ್ಕೆ ಬಂದಂತಾಗಿದೆ. ಸೋಂಕು ಇಳಿಕೆ ಆಗುತ್ತಿರುವುದು ಜನರಲ್ಲಿ ಸೋಂಕಿನ ಭೀತಿಯನ್ನು ಕಡಿಮೆ ಮಾಡಿ ಸ್ವಲ್ಪಮಟ್ಟಿಗೆ ನಿರಾಳತೆ ತಂದಿದೆ. ಕಳೆದ ಕೆಲ ತಿಂಗಳಿಂದ ಏರುಮುಖವಾಗಿದ್ದ ಸೋಂಕು ಪ್ರಕರಣಗಳು ಇಂದು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಇಳಿಕೆ ಯಾಗಿ ಜನ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ
ಇಂದು ರಾಜ್ಯದಲ್ಲಿ 2576 ಜನರಿಗೆಸೊಂಕು ದೃಢ ಪಟ್ಟಿದೆ ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು 8334 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 29 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ829640 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು773595 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 44805 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11221ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 931 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1439ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 340075ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 14ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3888ಕ್ಕೆ ಏರಿಕೆಯಾಗಿದೆ.
ಇಂದು5925ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು26098 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 04ಬಳ್ಳಾರಿ 60 ಬೆಳಗಾವಿ29ಬೆಂಗಳೂರು ಗ್ರಾಮಾಂತರ 36ಬೀದರ್04 ಚಾಮರಾಜನಗರ 19 ಚಿಕ್ಕಬಳ್ಳಾಪುರ 58 ಚಿಕ್ಕಮಗಳೂರು 46ಚಿತ್ರದುರ್ಗ 44ದಕ್ಷಿಣ ಕನ್ನಡ 51ದಾವಣಗೆರೆ 32ಧಾರವಾಡ 18 ಗದಗ 07ಹಾಸನ 87ಹಾವೇರಿ 06 ಕಲಬುರಗಿ 31ಕೊಡಗು 03ಕೋಲಾರ 16ಕೊಪ್ಪಳ 28ಮಂಡ್ಯ 92ಮೈಸೂರು 100ರಾಯಚೂರು 34ರಾಮನಗರ 20ಶಿವಮೊಗ್ಗ 44ತುಮಕೂರು 123ಉಡುಪಿ 31ಉತ್ತರ ಕನ್ನಡ 44ವಿಜಯಪುರ 46ಯಾದಗಿರಿ 24