ಕೊರೊನಾ ಇಂದು ಏರಿಕೆ,2298 ಜನರಿಗೆ ಸೋಂಕು ,12 ಸಾವು

ಬೆಂಗಳೂರು, ಮಾ. 24- ರಾಜ್ಯದಲ್ಲಿ ಇಂದೂ ಕೊರೊನಾ ಬಾರಿ ಏರಿಕೆಯಾಗಿದ್ದು ಸಾವಿನ ಸಂಖ್ಯೆಯು ಏರಿಕೆಯಾಗಿದೆ ಕಳೆದ 24 ಗಂಟೆಗಳಲ್ಲಿ 12 ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಸತತ ಎರಡನೇ ದಿನವಾದ ಇಂದು ಹೊಸ ಸೋಂಕು ಪ್ರಕರಣಗಳು ರಾಜ್ಯದಲ್ಲಿ ಎರಡುಸಾವಿರ ಗಡಿದಾಟಿದೆ ಬೆಂಗಳೂರು ನಗರದಲ್ಲೂ ಹೊಸ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕಳೆದ ಕೆಲದಿನಗಳಿಂದ ಹೊಸ ಪ್ರಕರಣಗಳು ಸಾವಿರದ ಗಡಿ ದಾಟಿದೆ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಿವೆ.

ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 12 ಸೋಂಕಿತ ರು ಮೃತಪಟ್ಟಿದ್ದು ಬೆಂಗಳೂರು ನಗರ ದಲ್ಲಿ7ಮಂದಿ ಮೈಸೂರಿನಲ್ಲಿ ಇಬ್ಬರು ಕೊಪ್ಪಳ ಧಾರವಾಡ ಮತ್ತು ಕಲಬುರ್ಗಿಯಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16 ಸಾವಿರ ಗಡಿದಾಟಿದೆ.

ಇಂದು ರಾಜ್ಯದಲ್ಲಿ2298 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು995ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 12 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ975955ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು946589 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 16886ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12461 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 143 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1398 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 421236ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 7 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4563ಕ್ಕೆ ಏರಿಕೆಯಾಗಿದೆ.
ಇಂದು637ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ405152 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು11520 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 20, ಬಳ್ಳಾರಿ 34, ಬೆಳಗಾವಿ14, ಬೆಂಗಳೂರು ಗ್ರಾಮಾಂತರ 37, ಬೀದರ್ 82, ಚಾಮರಾಜನಗರ 05, ಚಿಕ್ಕಬಳ್ಳಾಪುರ 08, ಚಿಕ್ಕಮಗಳೂರು 14, ಚಿತ್ರದುರ್ಗ 13, ದಕ್ಷಿಣ ಕನ್ನಡ 54, ದಾವಣಗೆರೆ 08, ಧಾರವಾಡ 38, ಗದಗ 08, ಹಾಸನ 60, ಹಾವೇರಿ 01, ಕಲಬುರಗಿ 118, ಕೊಡಗು 15, ಕೋಲಾರ 25, ಕೊಪ್ಪಳ 06, ಮಂಡ್ಯ 15, ಮೈಸೂರ74, ರಾಯಚೂರು 12, ರಾಮನಗರ 02, ಶಿವಮೊಗ್ಗ 12, ತುಮಕೂರು 94, ಉಡುಪಿ 79, ಉತ್ತರ ಕನ್ನಡ 10, ವಿಜಯಪುರ 37, ಯಾದಗಿರಿ 05.