ಕೊರೊನಾ: ಆಸ್ಪತ್ರೆ ಮಹಿಳಾ ಸಿಬ್ಬಂದಿ ಸಾವು

ಮಧುಗಿರಿ, ಏ. ೨೭- ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಳೆದ ೨೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗೌರಮ್ಮ (೫೪ ) ಕೊರಾನಾ ಚಿಕಿತ್ಸೆ ಫಲಕಾರಿಯಗದೆ ಮೃತಪಟ್ಟಿದ್ದಾರೆ.
ತಾಲ್ಲೂಕು ವೈದ್ಯಾಧಿಕಾರಿ ಡಾ. ರಮೇಶ್‌ಬಾಬು, ಕೊರೊನಾ ನೋಡಲ್ ಅಧಿಕಾರಿ ಡಾ. ರತ್ನಾವತಿ, ಡಾ. ಗಂಗಾಧರ್ ಸೇರಿದಂತೆ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮೃತರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.
ಸಿಕಂದರ್ ನೇತೃತ್ವದ ಮುಸ್ಲಿಂ ಯುವಕರ ತಂಡ ಅಂತ್ಯಕ್ರಿಯೆ ನೆರವೇರಿಸಿತು.