ಕೊರೊನಾ: ಅಸಹಾಯಕರಿಗೆ ಧೈರ್ಯ ತುಂಬುವ ಕಾರ್ಯ ಶ್ಲಾಘನೀಯ

ಸಿಂಧನೂರು.ಮೇ.೨೮-ಇಡೀ ದೇಶದೆಲ್ಲೆಡೆ ಕೋವಿಡ್ ೧೯ ಕೊರೊನಾ ಎರಡನೆಯ ಅಲೆಯಲ್ಲಿ ಅಸಂಖ್ಯಾತ ಜನರು ಪ್ರಾಣ ಕಳೆದುಕೊಂಡಿದ್ದು ಲಕ್ಷಾಂತರ ಕುಟುಂಬಗಳ ಬದುಕು ತುಂಬಾ ಕಷ್ಟದಲ್ಲಿದೆ ಇಂತಹ ತೊಂದರೆಯ ದಿನಗಳಲ್ಲಿ ಭಾರತ್ ಸ್ಕೌಟ್ ಗೈಡ್ಸ್ ರಾಯಚೂರು ಹಾಗೂ ಸಿಂಧನೂರು ಸ್ಥಳೀಯ ಸಂಸ್ಥೆಯು ತುಂಬಾ ತೊಂದರೆಯಲ್ಲಿರುವ ಆಯ್ದ ಕುಟುಂಬಳಿಗೆ ದಿನಸಿ ವಿತರಿಸಿ ಅವರಿಗೆ ಧೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆಯೆಂದು ಸಿಂಧನೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್. ಶರಣೇಗೌಡ ಹೇಳಿದರು.
ಅವರು ನಗರತದ ಪಿ.ಡಬ್ಲೂ.ಡಿ. ಕ್ಯಾಂಪಿನಲಿ ಸೂರು ಇಲ್ಲದ ಅಲೆಮಾರಿ ಕಾಡು ಸಿದ್ದರ ೧೫ ಅಸಹಾಯಕ ಬಡ ಕುಟುಂಬಗಳಿಗೆ ಭಾರತ್ ಸ್ಕೌಟ್ ಗೈಡ್ಸ್ ಸಿಂಧನೂರು ಸ್ಥಳೀಯ ಸಂಸ್ಥೆ ಹಾಗೂ ರಾಜು ಶೇಟ್ ಅಮೃತ ಕಿರಾಣಿ ಅಂಗಡಿ ಅವರ ಸಹಕಾರದೊಂದಿಗೆ ದಿನಸಿ ವಿತರಿಸಿ ಮಾತನಾಡಿದರು.
ರಾಜ್ಯ ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ, ಮಾತನಾಡಿ ಈ ಸಂದಿಗ್ದ ಸಮಯದಲ್ಲಿ ಪ್ರತಿಯೊಬ್ಬರೂ ಬಡವರಿಗೆ ಸಹಾಯ ಸಹಕಾರ ಮಾಡಲು ಮುಂದಾಗಬೇಕೆಂದು ಹೇಳಿದರು
ಭಾರತ್ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಆರ್.ಸಿ.ಪಾಟೀಲ್, ಜಿಲ್ಲಾ ಸಾಹಯಕ ಆಯುಕ್ತ ಬೀರಪ್ಪ ಶಂಭೋಜಿ, ರಾಜ್ಯ ಪರಿಷತ್ ಸದಸ್ಯ ರಾಮದಾಸ ನಾಯಕ, ತಾಲೂಕ ಕಾರ್ಯದರ್ಶಿ ಪ್ರಹ್ಲಾದ ದೇಸಾಯಿ, ಕೋಶಾಧ್ಯಕ್ಷ ಎನ್.ಬಿ.ಜೋಶಿ. ಸ್ಕೌಟ್ ಮಾಸ್ಟರ್ ಇಮಾಮಸಾಬ್ ದುದ್ದುಪೂಡಿ, ಜಿಲ್ಲಾ ಎಸ್.ಜಿ.ವಿ. ಅಂಬಣ್ಣ ನಾಯಕ ಅವರು ಉಪಸ್ಥಿತರಿದ್ದರು.